ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಇದರ ಪರಿಶೀಲನೆಗೆ ಬಂದಿದ್ದ ಡಿಸಿಎಂ ಡಿಕೆ ಶಿವಕುಮಾರ್, ಮಳೆ ನೀರು ನಿಲ್ಲುವುದಕ್ಕೆ ಜನ ಮನೆ ಸರಿಯಾಗಿ ಕಟ್ಟಿಕೊಳ್ಳದಿರುವುದೇ ಕಾರಣ ಎಂದಿದ್ದಾರೆ.
ನಿನ್ನೆ ನಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಡಿಕೆ ಶಿವಕುಮಾರ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಮಾಧ್ಯಮಗಳು ಕೆರೆಗಳು, ಕಾಲುವೆಗಳ ಹೂಳೆತ್ತದೇ ಇರುವುದೇ ನೀರು ನಿಲ್ಲುತ್ತಿರುವುದಕ್ಕೆ ಕಾರಣವಾಗುತ್ತಿದೆಯೇ ಎಂದು ಪ್ರಶ್ನೆ ಮಾಡಿವೆ.
ಇದಕ್ಕೆ ಉತ್ತರಿಸಿರುವ ಅವರು ಯಾರೀ.. ಹೇಳಿದ್ದು.. ಏನೋ ಆಂತರಿಕ ಸಮಸ್ಯೆಗಳಿರುತ್ತವೆ ಅಷ್ಟೇ. ಅವರು ಮನೆ ಸರಿಯಾಗಿ ಕಟ್ಟಿಕೊಳ್ಳಬೇಕು ಅಷ್ಟೇ. ಆಗ ಏನೂ ಸಮಸ್ಯೆಯಾಗಲ್ಲ ಎಂದಿದ್ದಾರೆ.
ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್, ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಾಗುತ್ತಿರುವುದು ಇದೇ ಮೊದಲಲ್ಲ, ಇದು ಹೊಸ ಸಮಸ್ಯೆಯೇನೂ ಅಲ್ಲ ಎಂದು ಟೀಕೆಗೊಳಗಾಗಿದ್ದರು.