ಸಿದ್ದರಾಮಯ್ಯ ಬಣಕ್ಕೆ ಸೆಡ್ಡು ಹೊಡೆಯಲು ಡಿಕೆ ಶಿವಕುಮಾರ್ ಮಹತ್ವದ ಹೆಜ್ಜೆ

Krishnaveni K
ಶುಕ್ರವಾರ, 12 ಡಿಸೆಂಬರ್ 2025 (09:10 IST)
Photo Credit: X
ಬೆಳಗಾವಿ: ಮೊನ್ನೆ ಸಿದ್ದರಾಮಯ್ಯ ಬಣ ಡಿನ್ನರ್ ಮೀಟಿಂಗ್ ನಡೆಸಿದ್ದರೆ ಅವರಿಗೆ ಕೌಂಟರ್ ಕೊಡಲು ಡಿಕೆ ಶಿವಕುಮಾರ್ ನಿನ್ನೆ ರಾತ್ರಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ.

ಸಿದ್ದರಾಮಯ್ಯ ಬಣಕ್ಕೆ ಕೌಂಟರ್ ಆಗಿ ಡಿಕೆ ಶಿವಕುಮಾರ್ ಕೂಡಾ ನಿನ್ನೆ ರಾತ್ರಿ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಈ ಸಭೆಯಲ್ಲಿ 30 ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯಿದೆ. ಬೆಳಗಾವಿಯಲ್ಲಿ ಅಧಿವೇಶನದ ನಡುವೆಯೂ ತಮ್ಮ ಆಪ್ತ ಬಣದ ಶಾಸಕರಿಗೆ ಡಿಕೆಶಿ ಔತಣಕೂಟ ಆಯೋಜಿಸಿದ್ದರು.

ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಡಿಕೆ ಶಿವಕುಮಾರ್ ಸೈಲೆಂಟ್ ಆಗಿದ್ದರು. ಆದರೆ ಮೊನ್ನೆಯಷ್ಟೇ ಯತೀಂದ್ರ ಸಿದ್ದರಾಮಯ್ಯ ಸಿಎಂ ಬದಲಾವಣೆ ಹೇಳಿಕೆ ನೀಡಿದ ಬಳಿಕ ಪರಿಸ್ಥಿತಿ ಬದಲಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಅಹಿಂದ ನಾಯಕರು ಡಿನ್ನರ್ ಮೀಟಿಂಗ್ ನಡೆಸಿದ್ದು ಡಿಕೆಶಿ ಬಣ ಕೆರಳುವಂತೆ ಮಾಡಿದೆ.

ಇದೇ ಕಾರಣಕ್ಕೆ ಈಗ ಡಿಕೆಶಿ ಬಣ ಡಿನ್ನರ್ ಮೀಟಿಂಗ್ ನಡೆಸಿದೆ. ಈ ವೇಳೆ ಸಚಿವ ಶರಣಪ್ರಕಾಶ್ ಪಾಟೀಲ್, ಎಂಸಿ ಸುಧಾಕರ್, ಕೆಎಚ್ ಮುನಿಯಪ್ಪ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದರು ಎನ್ನಲಾಗಿದೆ. ಸ್ವತಃ ಡಿಕೆ ಸುರೇಶ್ ಅವರೇ ಸಭೆಯ ನೇತೃತ್ವ ವಹಿಸಿದ್ದರು ಎನ್ನಲಾಗಿದೆ. ಸಭೆಯಲ್ಲಿ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ನೀಡಲು ತಮ್ಮ ಬೆಂಬಲವಿರುವುದಾಗಿ ಈ ನಾಯಕರು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಪದೇ ಪದೇ ಬಹಿರಂಗ ಹೇಳಿಕೆ ನೀಡುತ್ತಿರುವ  ಯತೀಂದ್ರ ವಿರುದ್ಧವೂ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಈ ಮೀಟಿಂಗ್ ಮಹತ್ವ ಪಡೆದುಕೊಂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೇಡ ಅನ್ನಕ್ಕಾಯ್ತದಾ.. ಡಿನ್ನರ್ ಮೀಟಿಂಗ್ ಬಗ್ಗೆ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

ವಿದ್ಯಾರ್ಥಿಗಳೇ ಗಮನಿಸಿ: ಎಸ್ಎಸ್ ಪಿ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುಲು ಕೊನೆ ದಿನಾಂಕ, ಹೇಗೆ ನೋಡಿ

ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಶಾಕಿಂಗ್ ಪ್ರತಿಕ್ರಿಯೆ

ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್ ಇನ್ನಿಲ್ಲ

ಸಿದ್ದರಾಮಯ್ಯ ಬಣಕ್ಕೆ ಸೆಡ್ಡು ಹೊಡೆಯಲು ಡಿಕೆ ಶಿವಕುಮಾರ್ ಮಹತ್ವದ ಹೆಜ್ಜೆ

ಮುಂದಿನ ಸುದ್ದಿ
Show comments