Publish Date: Thu, 16 Nov 2023 (16:21 IST)
Updated Date: Thu, 16 Nov 2023 (16:24 IST)
ಯತೀಂದ್ರ ಸಿದ್ದರಾಮಯ್ಯ ಅವರು ಸಿಎಂಗೆ ದಾರಿ ತಪ್ಪಿಸ್ತಿದ್ದಾರೆ ಅನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಸಿಎಂಗೆ ೪೦ ವರ್ಷ ಅನುಭವ ಇದೆ.ಯಾರು ದಾರಿ ತಪ್ಪಿಸಲು ಆಗಲ್ಲ ಎಂದು ಡಿಸಿಎಂ ಡಿಕೆಶಿವಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ.
ಕುಮಾರಸ್ವಮಿಯವರು ಹತಾಶರಾಗಿದ್ದಾರೆ ಅವರು, ಕುಮಾರಸ್ವಾಮಿ ಅವರಿಗೆ ಅನುಭವ, ಅದ್ಕೆ ಹಂಗೆ ಟ್ವೀಟ್ ಮಾಡಿದ್ದಾರೆ.ಮಾಡಲಿ ಬಿಡಿ.ಯತೀಂದ್ರ ಎಲ್ಲಿ ವರ್ಗಾವಣೆ ಬಗ್ಗೆ ಮಾತಾಡಿದ್ದಾರೆ ಹೇಳಿ..?ವಿಡಿಯೋ ನಾನು ನೋಡ್ದೆ, ಬೆಳಗ್ಗೆ ನೋಡಿದೆ.ಅದು ಹೋಗ್ಲಿ..
ಒಬ್ಬ ಮಾಜಿ ಶಾಸಕ ನಾಲ್ಕೈದು ವರ ವರ್ಗಾವಣೆ ಕೇಳಿದ್ರೆ ಏನ್ ತಪ್ಪು..?ನನ್ನ ಕ್ಷೇತ್ರದಲ್ಲಿ ನನ್ನ ಸಹೋದರ ಕೆಲವು ಕೆಲಸ ಅಟೆಂಡ್ ಮಾಡ್ತಾರೆ.ಜನ ಮನೆ, ಹಸು ಕುರಿ ಬೇಕಾಂತಾರೆ.ಅದನ್ನು ಸುರೇಶ್ ಅಟೆಂಡ್ ಮಾಡ್ತಾರೆ.ನಾನು ನಂತರ ಸಹಿ ಹಾಕ್ತೇನೆ.ನಾನು ಬಗುರ್ ಹುಕುಂ ಸಮಿತಿ ಅಧ್ಯಕ್ಷ ಆಗಿದ್ದೇನೆ.ಎಲ್ಲಾ ನೋಡೋದಕ್ಕೆ ಆಗಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.