ಡಿಕೆ ಶಿವಕುಮಾರ್ ಮೇಲಿಗೆ ಆ ಎರಡು ತೂಗುಗತ್ತಿ: ಯಾವುದು ನೋಡಿ

ಕೃಷ್ಣವೇಣಿ ಕೆ
ಭಾನುವಾರ, 7 ಜೂನ್ 2026 (12:50 IST)
ಬೆಂಗಳೂರು: ಸಿಎಂ ಆಗಿ ಹೊಸ ಭರವಸೆ ಮೂಡಿಸಿರುವ ಡಿಕೆ ಶಿವಕುಮಾರ್ ಮೇಲೆ ಎರಡು ತೂಗುಗತ್ತಿಗಳಿವೆ. ಕನಕಪುರ ಬಂಡೆ ಮೇಲಿರುವ ಎರಡು ಆತಂಕಗಳು ಏನು ನೋಡಿ.

2023 ರ ಚುನಾವಣಾ ಅಫಿಡವಿಟ್ ಪ್ರಕಾರ ಡಿಕೆ ಶಿವಕುಮಾರ್ ವಿರುದ್ಧ 19 ಕ್ರಿಮಿನಲ್ ಕೇಸ್ ಗಳಿವೆ. ಆ ಪೈಕಿ ಎರಡು ಕೇಸ್ ಗಳು ಅವರನ್ನು ತೂಗುಗತ್ತಿಯಂತೆ ಸದಾ ಕಾಡುತ್ತಿವೆ. ಅವುಗಳ ಕಾನೂನು ಹೋರಾಟದಲ್ಲಿ ಇನ್ನೂ ಅಂತಿಮ ತೀರ್ಪು ಬಂದಿಲ್ಲ. ಆ ಎರಡು ಪ್ರಕರಣಗಳು ಯಾವುವು ನೋಡೋಣ.

ಇಡಿ (Enforcement Directorate) ಮನಿ ಲಾಂಡರಿಂಗ್ ಪ್ರಕರಣ – ರದ್ದುಹಿನ್ನೆಲೆ:
2017 ರ ಆದಾಯ ತೆರಿಗೆ ದಾಳಿಯ ವೇಳೆ ದೆಹಲಿಯ ಅವರ ನಿವಾಸಗಳಲ್ಲಿ ₹8.59 ಕೋಟಿ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಮನಿ ಲಾಂಡರಿಂಗ್ ಕಾಯ್ದೆಯಡಿ (PMLA) ಈ ಪ್ರಕರಣ ದಾಖಲಿಸಿತ್ತು. ಈ ಸಂಬಂಧ ಅವರು ೨೦೧೯ ರಲ್ಲಿ ಸುಮಾರು 50 ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದರು. 

ಪ್ರಸ್ತುತ ಸ್ಥಿತಿ: ಮಾರ್ಚ್ 5, 2024 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಂಪೂರ್ಣವಾಗಿ ಖುಲಾಸೆಗೊಳಿಸಿದೆ (Quashed). ಆದಾಯ ತೆರಿಗೆ ವಂಚನೆಯು ಪಿಎಂಎಲ್‌ಎ ಅಡಿಯಲ್ಲಿ ನಿಗದಿಪಡಿಸಿದ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಸಿಬಿಐ (CBI) ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ – ಕಾನೂನು ಹೋರಾಟ ಬಾಕಿ
ಹಿನ್ನೆಲೆ: ₹74.93 ಕೋಟಿ ರೂಪಾಯಿಗಳಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಸಿಬಿಐ ಈ ಪ್ರಕರಣ ದಾಖಲಿಸಿತ್ತು. 

ಪ್ರಸ್ತುತ ಸ್ಥಿತಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಒಪ್ಪಿಗೆಯನ್ನು (Consent) ಹಿಂತೆಗೆದುಕೊಂಡು ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿತು. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಸಿಬಿಐ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಉಳಿದವು ಅಂತಹದ್ದೇನೂ ಗಂಭೀರ ಪ್ರಕರಣಗಳಲ್ಲ. ಆದರೆ ಈ ಎರಡು ಪ್ರಕರಣಗಳು ಡಿಕೆಶಿಯನ್ನು ಬಹಳ ಕಾಡಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಗನಿಗೆ ಮೊಬೈಲ್ ನೋಡಬೇಡ ಎಂದಿದ್ದೆ ತಪ್ಪಾಯ್ತು, ತಂದೆ, ಅಕ್ಕನ ಹತ್ಯೆ, ತಾಯಿ ಗಂಭೀರ

ಬಿಜೆಪಿಗೆ ಗುಡ್‌ಬೈ ಹೇಳಿ 24ಗಂಟೆಯೊಳಗೆ ಕೆ ಅಣ್ಣಾಮಲೈಗೆ ಬೆಂಬಲ ಕೊಟ್ಟ ಜನವೆಷ್ಟು ಗೊತ್ತಾ, ಶಾಕ್‌

ಮಲ್ಲಿಕಾರ್ಜುನ ಖರ್ಗೆಯವರ ಅರೆಬರೆ ಜ್ಞಾನ ಅಪಾಯಕಾರಿ: ಜೆಪಿ ನಡ್ಡಾ ಕಿಡಿ

ವಚನಾನಂದ ಶ್ರೀ ವಿರುದ್ಧದ ಫೋಕ್ಸೋ ಕೇಸ್‌. ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆ

ತಮಿಳುನಾಡು: 300 ಕ್ಕೂ ಹೆಚ್ಚು ಎಐಎಡಿಎಂಕೆ ಸದಸ್ಯರು ಟಿವಿಕೆಗೆ ಸೇರ್ಪಡೆ

ಮುಂದಿನ ಸುದ್ದಿ
Show comments