ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ದೇಶದ ಶ್ರೀಮಂತ ಸಚಿವರ ಪಟ್ಟಿಯಲ್ಲಿ ನಂ2 ನೇ ಸ್ಥಾನದಲ್ಲಿದ್ದಾರೆ. ಡಿಕೆ ಸಾಹೇಬ್ರ ಆಸ್ತಿ ಎಷ್ಟು ಎಂದು ಗೊತ್ತಾ?
ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫೋರ್ಮ್ಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ದೇಶದ ಶ್ರೀಮಂತ ಸಚಿವರು ಯಾರು ಎಂದು ಪಟ್ಟಿ ಹೊರಬಿದ್ದಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ನಂ 2 ನೇ ಸ್ಥಾನದಲ್ಲಿದ್ದಾರೆ.
ಡಿಕೆ ಶಿವಕುಮಾರ್ ಆಸ್ತಿ ಮೌಲ್ಯ ಬರೋಬ್ಬರಿ 1413 ಕೋಟಿ ರೂ. ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವವರು ಟಿಡಿಪಿ ನಾಯಕ ಕೇಂದ್ರ ಸಚಿವ ಚಂದ್ರಶೇಖರ ಪೆಮ್ಮುಸಾನಿ 5705 ಕೋಟಿ ರೂ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು 971 ಕೋಟಿ ರೂ.ಗಳ ಒಡೆಯರಾಗಿದ್ದ ಮೂರನೇ ಸ್ಥಾನದಲ್ಲಿದ್ದಾರೆ.
ಡಿಕೆ ಶಿವಕುಮಾರ್ ಮಾತ್ರವಲ್ಲ ಶ್ರೀಮಂತ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಕೆಎಚ್ ಪುಟ್ಟಸ್ವಾಮಿ ಗೌಡ 1000 ಕೋಟಿ ಗೂ ಅಧಿಕ ಆಸ್ತಿ ಮೌಲ್ಯದ ಆಸ್ತಿ ಹೊಂದಿದವರಾಗಿದ್ದಾರೆ. ಪ್ರಿಯಾ ಕೃಷ್ಣ ಆಸ್ತಿಯೂ ಹತ್ತಿರ ಹತ್ತಿರ 1000 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.