Select Your Language

Notifications

webdunia
webdunia
webdunia
webdunia

ನೀರಾ ಕುಡಿದಿದ್ದೆ ಆದರೆ ಕಿಕ್‌ ಹೊಡೀಲೇ ಇಲ್ಲ ಎಂದ ಡಿಕೆಶಿ

dk shivakumar

geetha

bangalore , ಶುಕ್ರವಾರ, 23 ಫೆಬ್ರವರಿ 2024 (17:23 IST)
ಬೆಂಗಳೂರು: ಸಾರಾಯಿ ನಿಷೇಧದ ನಂತರ ಅನೇಕರು ಬೀದಿಗೆ ಬಂದಿದ್ದು, ಅಬಕಾರಿ ಇಲಾಖೆ ವತಿಯಿಂದ ಇವರಿಗಾಗಿ ಯಾವುದಾದರೂ ಕಾರ್ಯಕ್ರಮ ಹಮ್ಮಿಕೊಂಡಿದೆಯೇ ಎಂದು ಹರಿಪ್ರಸಾದ್‌ ಪ್ರಶ್ನಿಸಿದಾಗ,  ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್  ನಡುವೆ ನೀರಾ ಚರ್ಚೆ ನಡೆಯಿತು.30-35 ವರ್ಷಗಳ ಹಿಂದೆ ನಾನು ನೀರಾ  ಕುಡಿದಿದ್ದೆ. ಅದು ಜ್ಯೂಸ್ ನಂತಿತ್ತು. ನನಗೆ ಯಾವುದೇ ಮತ್ತು ಬರಲಿಲ್ಲ ಎಂದು   ಡಿಸಿಎಂ ಡಿ.ಕೆ. ಶಿವಕುಮಾರ್  ಸದನದಲ್ಲಿ ಪ್ರಾಸ್ತಾವಿಕವಾಗಿ ಹೇಳಿದ ಮಾತು ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು. ಶುಕ್ರವಾರ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ಬಿ.ಕೆ ಹರಿಪ್ರಸಾದ್ ಅವರು ಸಾರಾಯಿ ನಿಷೇಧದ ಕುರಿತು ಪ್ರಸ್ತಾಪಿಸಿದಾಗ ಡಿಕೆಶಿ ಹೀಗೆ ನುಡಿದರು.

ಡಿ.ಕೆ. ಶಿವಕುಮಾರ್ ಅವರು ನೀವು ನೀರಾ ಕುಡಿಯುವ ಪ್ರಯತ್ನ ಮಾಡಿಲ್ಲವೇ ಎಂದು ಪೂಜಾರಿ ಅವರಿಗೆ ಕೇಳಿದರು.   ಪೂಜಾರಿ ಅವರು, “ನಾನು ನೀರಾ ಕುಡಿಯಬೇಕು ಎಂದು ಅಂದುಕೊಂಡೆ. ಆದರೆ, ಅದನ್ನು ಕುಡಿದ ಮೇಲೆ ನಿಂತುಕೊಳ್ಳುವ ಶಕ್ತಿ ನನ್ನಲ್ಲಿರುತ್ತದೆಯೇ ಎಂಬ ಅನುಮಾನ ಮೂಡಿತು. ನಾನು ಡಿ.ಕೆ. ಶಿವಕುಮಾರ್ ಅವರಂತೆ ದಪ್ಪಗಿದ್ದರೆ ಕುಡಿದ ನಂತರವೂ ನಿಲ್ಲುವ ಶಕ್ತಿ ಇರುತ್ತಿತ್ತು.” ಎಂದರು.ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು,   ಸುಮಾರು ವರ್ಷಗಳ ಹಿಂದೆ ನಮ್ಮ ಪಕ್ಕದ ಊರಿನಲ್ಲಿ ನಾನು ನೀರಾ ಕುಡಿದಿದ್ದೆ. ಅದರಿಂದ ಮತ್ತು ಬರುವುದಿಲ್ಲ” ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೀಟು ಹಂಚಿಕೆಯ ಎಲ್ಲಾ ಗೊಂದಲ ನಿವಾರಣೆ ಮಾಡ್ತೀವಿ-ನಿಖಿಲ್ ಕುಮಾರಸ್ವಾಮಿ