Select Your Language

Notifications

webdunia
webdunia
webdunia
webdunia

ಡಿಕೆಶಿ ಭಾಷಣ ಲೀಕ್

ಡಿಕೆಶಿ ಭಾಷಣ ಲೀಕ್
bangalore , ಸೋಮವಾರ, 1 ಆಗಸ್ಟ್ 2022 (20:41 IST)
ಆ.3 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಡಬೇಕಿದ್ದ ಭಾಷಣ ಎರಡು ದಿನ ಮುನ್ನವೇ ಸೋರಿಕೆ ಆಗುವ ಮೂಲಕ ಕೆಪಿಸಿಸಿ ಮಾಧ್ಯಮ ವಿಭಾಗ ಮುಜುಗರಕ್ಕೆ ಸಿಲುಕುವಂತಾಗಿದೆ. ಸಿದ್ದರಾಮೋತ್ಸವ ಆಚರಣೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರಿಗೋಸ್ಕರ ಸಿದ್ಧಪಡಿಸಿದ್ದ ಭಾಷಣದ ಪ್ರತಿ ಕಣ್ ತಪ್ಪಿನಿಂದಾಗಿ ಪಕ್ಷದ ವಿವಿಧ ವಾಟ್ಸಪ್ ಗ್ರೂಪ್ಗಳಲ್ಲಿ ಪೋಸ್ಟ್ ಆಗಿದೆ. ತಪ್ಪಿನ ಅರಿವಾಗಿ ತಕ್ಷಣವೇ ಕೆಪಿಸಿಸಿ ಮಾಧ್ಯಮ ವಿಭಾಗ ಭಾಷಣದ ಪ್ರತಿಯನ್ನು ಅಳಿಸಿ ಹಾಕಿದೆ. ಇದರಲ್ಲಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡುವ ಕೆಲಸಕ್ಕೆ ಡಿಕೆಶಿ ಮಂದಾಗಿದ್ರಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಈ ಬಗ್ಗೆ  ಸ್ಪಷ್ಟನೆ ನೀಡಿರುವ ಡಿ.ಕೆ ಶಿವಕುಮಾರ್ ಮಾಧ್ಯಮ ವಿಭಾಗ ಭಾಷಣದ ಕಾಪಿ ಕಣ್ತಪ್ಪಿನಿಂದ ಗ್ರೂಪ್ ಗೆ ಫಾರ್ವಾಡ್ ಆಗಿತ್ತು ದಯವಿಟ್ಟು ಇದನ್ನು ಲೀಕ್ ಎಂದು ಸುದ್ದಿ ಮಾಡಬೇಡಿ ಎಂದು ಕೇಳಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆ, ಮೆರವಣಿಗೆಗೆ ಬ್ರೇಕ್