Select Your Language

Notifications

webdunia
webdunia
webdunia
webdunia

ಕಾರ್ಯಕರ್ತರು ನಮ್ಮ ಆಸ್ತಿ..!

ಕಾರ್ಯಕರ್ತರು ನಮ್ಮ ಆಸ್ತಿ..!
bangalore , ಸೋಮವಾರ, 1 ಆಗಸ್ಟ್ 2022 (20:10 IST)
ಸಿ ಟಿ ರವಿ
ಪ್ರತಿ  ಕಾರ್ಯಕರ್ತರೂ ಆಸ್ತಿಯೇ. ಅಧಿಕಾರ ಇಲ್ಲದೆ ಇದ್ದಾಗ ವಿಚಾರಕ್ಕಾಗಿ ಹೋರಾಟ ಮಾಡಿದ ಅನೇಕ ಕಾರ್ಯಕರ್ತರು ಇದ್ದಾರೆ. ಅವರು ನಮ್ಮ ಮೆಟ್ಟಲು ಅವರನ್ನು ಮರೆಯುವ ಪ್ರಶ್ನೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ರು. ಈ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವ್ರು, ನಾನು ಈಶ್ವರಪ್ಪ ಅಭಿಪ್ರಾಯ ಒಪ್ಪಲ್ಲ, 
ನಾಲಗೆಯೂ ನಮ್ಮದು ದವಡೆಯೂ ನಮ್ಮದು. ಕೆಲವೊಮ್ಮೆ ದವಡೆ ನಾಲಗೆಯನ್ನು ಕಚ್ಚುತ್ತೆ. ಪ್ರಶ್ನಿಸಿದೇ ಅಪರಾಧ ಎನ್ನುವ ಪಕ್ಷ ನಮ್ಮದಲ್ಲ, ಆದರೆ ಪಕ್ಷದ ವೇದಿಕೆಯಲ್ಲಿ ಪ್ರಶ್ನೆ ಮಾಡಬೇಕು ಎಂಬುದಷ್ಟೇ ಪ್ರಶ್ನೆ ಇರುವುದು‌. ತಮ್ಮ ತಪ್ಪಿನಿಂದಾಗಿ ಯಾವ ಕಾರ್ಯಕರ್ತರೂ ದೂರ ಹೋಗಬಾರದು. ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ. ನಮ್ಮ ಹೋರಾಟ ನಮ್ಮ ಸೈದ್ದಾಂತಿಕ ವಿರೋಧಿಗಳ ವಿರುದ್ಧವಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.
ನಮ್ಮ ತಪ್ಪಿನಿಂದಾಗಿ ಯಾರೂ ದೂರವಾಗಬಾರದು. ನಮ್ಮದಲ್ಲದ ತಪ್ಪಿನಿಂದಲ್ಲದ ಕಾರಣಕ್ಕಾಗಿ ಆದರೆ ಅವರಿಗೆ ಮನವರಿಕೆ ಮಾಡಲಾಗುವುದು. ಯಾರಾದರೂ ದುರುದ್ದೇಶಪೂರ್ವಕವಾಗಿ ಹೇಳಿಕೆ ಕೊಟ್ಟರೆ ಆಗ ಪಕ್ಷದ ನಿಯಮದ ಪ್ರಕಾರ ಕ್ರಮ ಆಗುತ್ತದೆ. ಎಲ್ಲರನ್ನು ಜೋಡಿಸಿಕೊಳ್ಳುವ ಕೆಲಸ ಆಗಲಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಇಟಿ ರಿಸಲ್ಟ್ ನಿಂದ ನೊಂದ ವಿದ್ಯಾರ್ಥಿಗಳಿಂದ ಉಗ್ರ ಹೋರಾಟದ ಎಚ್ಚರಿಕೆ