Select Your Language

Notifications

webdunia
webdunia
webdunia
webdunia

ಟಾಲಿವುಡ್ ನಲ್ಲಿ ನಿರ್ಮಾಪಕರ ಸಂಘದಿಂದ ಮಹತ್ವವಾದ ನಿರ್ಧಾರ

An important decision by the Producers Guild in Tollywood
bangalore , ಸೋಮವಾರ, 1 ಆಗಸ್ಟ್ 2022 (18:08 IST)
ಚಿತ್ರರಂಗದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಟಾಲಿವುಡ್ ನಿರ್ಮಾಪಕರ ಸಂಘ ಮಹತ್ವದ ನಿರ್ಧಾರವೊಂದನ್ನ ಕೈಗೊಂಡಿದೆ. ಇಂದಿನಿಂದ (ಆಗಸ್ಟ್ 1) ಸಿನಿಮಾ ಶೂಟಿಂಗ್ ನಿಲ್ಲಿಸುವುದಾಗಿ ನಿರ್ಧರಿಸಿದೆ.
 
ಇತ್ತೀಚೆಗಷ್ಟೇ ಹೈದರಾಬಾದ್‌ನ ಫಿಲಂ ಚೇಂಬರ್‌ನಲ್ಲಿ ಟಿಕೆಟ್ ದರ, ಒಟಿಟಿ ಬಿಡುಗಡೆ, ಕಾರ್ಮಿಕರ ದಿನಗೂಲಿ ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಸಭೆ ನಡೆಸಿದ್ದರು. ಈ ವೇಳೆ, ಎಲ್ಲ ನಿರ್ಮಾಪಕರು ಸ್ವಯಂಪ್ರೇರಣೆಯಿಂದ ಆಗಸ್ಟ್ 1 ರಿಂದ ಚಿತ್ರೀಕರಣ ತಡೆಹಿಡಿಯುವುದಾಗಿ ನಿರ್ಧರಿಸಿದ್ದರು. ಅದರಂತೆ ಸಿನಿಮಾ ಶೂಟಿಂಗ್ ನಿಲ್ಲಿಸಲಾಗಿದೆ ಎಂದು ತೆಲುಗು ಚಲನಚಿತ್ರ ನಿರ್ಮಾಪಕರ ಸಂಘ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ಮಾಪಕ ದಿಲ್ ರಾಜು, 'ಕೊರೊನಾ ನಂತರ ಹೆಚ್ಚು ಹಾನಿಗೊಳಗಾದ ಉದ್ಯಮಗಳಲ್ಲಿ ಚಲನಚಿತ್ರೋದ್ಯಮವೂ ಒಂದು. ಒಂದೆಡೆ ಟಿಕೆಟ್ ದರ ಮತ್ತೊಂದೆಡೆ ಒಟಿಟಿ ಸಿನಿಮಾ ಥಿಯೇಟರ್​​ಗಳ ಉಳಿವು ಪ್ರಶ್ನಾರ್ಹವಾಗಿದೆ. ಹಾಗಾಗಿ, ನಾವು ಆಗಸ್ಟ್ 1ರಿಂದ ತೆಲುಗು ಚಿತ್ರಗಳ ಚಿತ್ರೀಕರಣವನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ನಿವಾರಿಸುವ ಮಾರ್ಗಗಳ ಬಗ್ಗೆ ಚರ್ಚಿಸುತ್ತೇವೆ' ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ಯಾಟೂ ಅಂಗಡಿ ಮಾಲೀಕನೋರ್ವ ನೇಣುಬಿಗಿದುಕೊಂಡು ಸಾವು