Publish Date: Mon, 01 Aug 2022 (20:29 IST)
Updated Date: Mon, 01 Aug 2022 (20:38 IST)
ಆಮ್ ಆದ್ಮಿ ಪಕ್ಷದ ವತಿಯಿಂದ ಮುಂಬರುವ ಚುನಾವಣೆಯ ಪ್ರೆಸ್ಸಿಗೆ ತಯಾರಿ ಮಾಡಿಕೊಳ್ಳುವ ಪದ್ದತಿ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ಮಾಡಿದೆ.ಇದೇ ವೇಳೆ ಆಮ್ ಆದ್ಮಿಯಿಂದ ಮಾತನಾಡಿದ ಮೊದಲ ನಮ್ಮ ಪಕ್ಷ ಪ್ರಾರಂಭವಾಗಿ 10 ವರ್ಷ ಆಗಿಲ್ಲ.ಆಗಲೇ 2 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಾರೆ.ಅರವಿಂದ ಕೇಜ್ರಿವಾಲ್ ಅವರ ಜನಪರ ಕಾರ್ಯಕ್ರಮಗಳು
ನೋಡಿ ದೇಶದ ಜನ ನಮ್ಮ ಪಕ್ಷಕ್ಕೆ ಬಹುಮತ ಹೇಳಿದ್ದಾರೆ.ಅಷ್ಟೇ ನಮ್ಮ ರಾಜ್ಯದಲ್ಲಿ ಈಗಿರುವ ಮೂರು ಪಕ್ಷಗಳು ಜನರಿಗೆ ಸ್ಪಂದಿಸದೇ ಕಾಲಹರಣ ಮಾಡುತ್ತಿವೆ ಎಂದು ಬೇರೆ ಪಕ್ಷಗಳ ಬಗ್ಗೆ ಕಿಡಿಕಾರಿದ್ದಾರೆ.
ಇನ್ನು ಮುಂಬರುವ ಪಾಲಿಕೆ ಚುನಾವಣೆಗೆ ಕಳೆದೆರಡು ವರ್ಷಗಳಿಂದ ತಯಾರು ಮಾಡಿಕೊಂಡು ಬರ್ತಾ ಇದ್ದೀವಿ.ಇನ್ನು ಕೆಲವೇ ದಿನಗಳಲ್ಲಿ ಸ್ಥಳೀಯ ಪಾಲಿಕೆ ಚುನಾವಣೆ ಪ್ರಕ್ರಿಯೆ ಆಗುತ್ತಿದೆ.ಹೀಗಾಗಿ ನಾವು ಆದ್ಮಿ ಪಕ್ಷದ ಪ್ರಚಾರ ಸಮಿತಿಗೆ ಅಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡಿಕೊಂಡಿದ್ದೇವೆ. .
ಇದನ್ನು ಆಮ್ ಆದ್ಮಿ ಪಕ್ಷ ದೇಶದ ಹಲವು ಕಡೆ ತೋರಿಸಿಕೊಟ್ಟು ಅಲ್ಲಲ್ಲಿ ಜಯಭೇರಿ ಬಾರಿಸಿದೆ. ಇನ್ನು ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಉಪಾಧ್ಯಕ್ಷ ಭಾಸ್ಕರ್ ರಾವ್, ಕೆ,ಮಥಾಯಿ, ಮೋಹನ್ ದಾಸರಿ, ಜಗದೀಶ್ ಸದಂ, ಲಕ್ಷ್ಮಿಕಾಂತ್ ರಾವ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.