Select Your Language

Notifications

webdunia
webdunia
webdunia
webdunia

ಮತ ಎಣಿಕೆಗೆ ಸಕಲ ಸಿದ್ಥತೆ ಕೈಗೊಂಡ ಜಿಲ್ಲಾಡಳಿತ

ಮತ ಎಣಿಕೆಗೆ ಸಕಲ ಸಿದ್ಥತೆ ಕೈಗೊಂಡ ಜಿಲ್ಲಾಡಳಿತ
ಬಾಗಲಕೋಟೆ , ಸೋಮವಾರ, 5 ನವೆಂಬರ್ 2018 (19:27 IST)
ಜಮಖಂಡಿ ವಿಧಾನಸಭೆ ಉಪಚುನಾವಣೆಯ ಫಲಿತಾಂಶ ನ.12ರಂದು ಹೊರ ಬೀಳಲಿದ್ದು, ಬಾಗಲಕೋಟೆ ಜಿಲ್ಲಾಡಳಿತ ಸಲಕ‌ಸಿದ್ದತೆಗಳನ್ನ ಮಾಡಿಕೊಂಡಿದೆ.

ಜಮಖಂಡಿ ನಗರದ ಮಿನಿವಿಧಾನಸೌಧದಲ್ಲಿ ಮತ ಎಣಿಕೆ ನಡೆಯಲಿದ್ದು, ಚುನವಣಾ ಅಧಿಕಾರಿಗಳು  ಮತ ಎಣಿಕೆಗೆ ಬೇಕಾದ ವ್ಯವಸ್ಥೆಗಳನ್ನ ಮಾಡಿಕೊಂಡಿದ್ದಾರೆ. ಈ ಕುರಿತು ಮಾಹಿತಿ‌ ನೀಡಿರುವ ಬಾಗಲಕೋಟೆ‌ ಜಿಲ್ಲಾಧಿಕಾರಿ ಕೆ.ಜೆ.ಶಾಂತಾರಾಂ,  ಮತ ಎಣಿಕೆಗೆ 14 ಟೇಬಲ್ಗಳ ವ್ಯವಸ್ಥೆಯನ್ನ ಮಾಡಿಕೊಂಡಿದ್ದು, ಒಂದು ಟೇಬಲಗೆ ಮೂರುಜನ ಚುನಾವಣಾ ಸಿಬ್ಬಂದಿಯನ್ನ ನೇಮಿಸಲಾಗಿದೆ. ಏಜೆಂಟರುಗಳಿಗೆ, ಪಕ್ಷದ ಮುಖಂಡರುಗಳಿಗೆ, ಅಭ್ಯರ್ಥಿಗಳಿಗೆ ಕೂರಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ.

ಇನ್ನು  ಜಿಲ್ಲಾ ಪೊಲೀಸ್ ಇಲಾಖೆ ಕೂಡ ಭದ್ರತೆ ದೃಷ್ಠಿಯಿಂದ ಈಗಾಗಲೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಬಾಗಲಕೋಟೆ ಎಸ್ ಪಿ ಸಿ.ಬಿ.ರಿಷ್ಯಂತ್, ಮತ ಎಣಿಕೆ ಕೇಂದ್ರದ 50 ಮೀಟರ್ ಹೊರಗಡೆ ಬ್ಯಾರಿಗೇಡ್ ಗಳನ್ನು ಹಾಕಲಾಗುತ್ತೆ. 50 ಮೀಟರ್ ಒಳಗಡೆ ಯಾರಿಗೂ ಪ್ರವೇಶ ಇರೋದಿಲ್ಲ. ಪೊಲೀಸ್, ಚುನಾವಣಾ ಸಿಬ್ಬಂದಿ ಹಾಗೂ ಎಜೆಂಟರ್ ಗಳಿಗೆ ಮಾತ್ರ 50ಮೀಟರ್ ಒಳಗೆ ಪ್ರವೇಶಕ್ಕೆ ಅವಕಾಶ ಇದೆ ಅಂತಾ ತಿಳಿಸಿದ್ದಾರೆ.

 ಇನ್ನು ಕೆಎಸ್ ಆರ್ ಪಿ, ಡಿಎಆರ್, ಸಿಐಎಸ್ಎಫ್ ಹಾಗೂ ಪೊಲೀಸ್ ಇಲಾಖೆಯವ್ರು ಸೇರಿ ಅಂದಾಜು 500ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಫಲಿತಾಂಶದ ಬಳಿಕ ಗೊಂದಲ ಉಂಟಾಗುವ ಜಮಖಂಡಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಈಗಾಗಲೇ ಬಿಗಿ ಬಂದೋಬಸ್ತ್ ಗೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಗಲಾಟೆ ಸಂಭವಿಸಬಹುದಾದಂತಹ ಗ್ರಾಮಗಳಲ್ಲೂ ಈಗಾಗಲೇ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದೇವೆ. 48 ಗಂಟೆಗಳ ಕಾಲ ಕ್ಷೇತ್ರದಾದ್ಯಂತ ಮಧ್ಯ ನಿಷೇಧ ಕೂಡಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಾರಕ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದ ಸಚಿವ