ಉಪಚುನಾವಣೆ ರಿಸಲ್ಟ್: ಕೌಂಟಿಂಗ್ ಗೆ ಕೌಂಡೌನ್

ಸೋಮವಾರ, 5 ನವೆಂಬರ್ 2018 (18:41 IST)
ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತ ಏಣಿಕೆಗೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಇವೆ.

ಮಂಡ್ಯದ ಸರ್ಕಾರಿ ಸ್ವಾಯತ್ತ ಮಹಾ ವಿದ್ಯಾಲಯ ದಲ್ಲಿ ನ. 12ರಂದು ಬೆಳಗ್ಗೆ 8 ರಿಂದ ಮತ ಎಣಿಕೆ ಕಾರ್ಯ ಆರಂಭ ಆಗಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.

ಸುಮಾರು 20 ರೂಂ.ಗಳಲ್ಲಿ 17 ಸುತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಅಭ್ಯರ್ಥಿ ಗಳಾದ ಎಲ್.ಆರ್.ಶಿವರಾಮೇಗೌಡ, ಡಾ.ಸಿದ್ದರಾಮಯ್ಯ ಅವರ ಹಣೆ ಬರಹ ನಿರ್ಧಾರ ಆಗಲಿದೆ.

ಮತದಾರ ಪ್ರಭು ನೀಡಿರುವ ತೀರ್ಪು ಅಭ್ಯರ್ಥಿಗಳ ಹಣೆ ಬರಹ ಬಹಿರಂಗಗೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭೂ ವಿಸ್ತರಣೆ ಯೋಜನೆ ವಿರುದ್ಧ ಪ್ರತಿಭಟನೆ