Select Your Language

Notifications

webdunia
webdunia
webdunia
webdunia

ಪಿಂಚಣಿ ಸಿಗದ ಕಾರಣ ಮನನೊಂದು ಶಿಕ್ಷಕ ಆತ್ಮಹತ್ಯೆ

ಪಿಂಚಣಿ ಸಿಗದ ಕಾರಣ ಮನನೊಂದು ಶಿಕ್ಷಕ ಆತ್ಮಹತ್ಯೆ
bangalore , ಗುರುವಾರ, 23 ಫೆಬ್ರವರಿ 2023 (16:06 IST)
ಅನುದಾನಿತ ಶಾಲಾ ಶಿಕ್ಷಕರಿಂದ ಪಿಂಚಣಿಗಾಗಿ ನಡೆಯುತ್ತಿರುವ ಅನಿರ್ಧಿಷ್ಟವಧಿ ಪ್ರತಿಭಟನೆಯಲ್ಲಿ ಭಾಗಿಯಾಗಲು ರಾಯಚೂರುನಿಂದ ಬಂದಿದ್ದ ಶಿಕ್ಷಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಂಕರಪ್ಪ ಬೋರಡ್ಡಿ ಮೃತ ದುರ್ದೈವಿ. ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಅನುದಾನಿತ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದ ಶಂಕರಪ್ಪ. ಮಂಗಳವಾರ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಅನಿರ್ದಿಷ್ಟವಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ. ಪ್ರತಿಭಟನೆ ಮುಗಿದ ಬಳಿಕ ಶಿಕ್ಷಕರ ಸದನದಲ್ಲಿ ತಂಗಿದ್ದ ಶಂಕರಪ್ಪ. ಶಿಕ್ಷಕರ ಸದನದಲ್ಲಿ ಬ್ಯಾಗ್ ಇಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಬಳಿ ಬಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬುಧವಾರ ಮಧ್ಯರಾತ್ರಿಯಲ್ಲಿ ಈ ಘಟನೆ ನಡೆದಿದ್ದು, ಸಾವಿಗೆ ಕಾರಣವೇನೆಂಬುದು ತಿಳಿದಿಲ್ಲ. ನಿನ್ನೆ ತಡರಾತ್ರಿ ಶಂಕರಪ್ಪ ಅವರ ನಿವಾಸಕ್ಕೆ ಮೃತದೇಹ ಕಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಪಾಲಿಕೆಯಲ್ಲಿ ಮುಂದುವರಿದ ಕೋಲಾಹಲ