Select Your Language

Notifications

webdunia
webdunia
webdunia
webdunia

ನೌಕಾಪಡೆಯ ಗಸ್ತು ಹಡಗು ಐಎನ್‌ಎಸ್ ಸುಮೇಧಾದಲ್ಲಿ ದುರ್ಘಟನೆ

ನೌಕಾಪಡೆಯ ಗಸ್ತು ಹಡಗು ಐಎನ್‌ಎಸ್ ಸುಮೇಧಾದಲ್ಲಿ ದುರ್ಘಟನೆ
ಕಾರವಾರ , ಸೋಮವಾರ, 25 ಮೇ 2020 (21:08 IST)
ಭಾರತೀಯ ನೌಕಾಪಡೆಯ ಗಸ್ತು ಹಡಗು ‘ಐ.ಎನ್.ಎಸ್ ಸುಮೇಧಾ’ದಲ್ಲಿ ದುರ್ಘಟನೆ ಸಂಭವಿಸಿದೆ.

ಇಂಜಿನ್‌ನ ಫ್ಲೈವೀಲ್ ತುಂಡಾಗಿ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದ ನೌಕಾಪಡೆ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.

ಹಡಗಿನ ಎಂಜಿನ್ ರೂಂ ಆರ್ಟಿಫೈಸರ್ ಆಗಿದ್ದ ಹರಿಯಾಣದ ಝಜ್ಜರ್‌ನ ಗೌರವ್ ದತ್ (27) ಮೃತರು. ಮೇ 19ರಂದು ಸಾಯಂಕಾಲ ಗಲ್ಫ್ ಆಫ್ ಏಡನ್‌ನಲ್ಲಿ ಅರಬ್ಬಿ ಸಮುದ್ರದಲ್ಲಿ ಐಎನ್‌ಎಸ್ ಸುಮೆಧಾ ಗಸ್ತು ನಡೆಸುತ್ತಿದ್ದಾಗ ನೌಕೆಯ ಮುಖ್ಯ ಇಂಜೀನ್‌ನ ನಿಯಂತ್ರಕ ಚಕ್ರದ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಅದರ ರೆಕ್ಕೆಯ ಭಾಗ ಎದೆಗೆ ಬಡಿದು ಗೌರವ್ ಕೊನೆಯುಸಿರೆಳೆದಿದ್ದರು. ಈ ಪ್ರದೇಶವು ಕಾರವಾರದಿಂದ ಸುಮಾರು 1535 ನಾಟಿಕಲ್ ಮೈಲು (3000 ಕಿಲೋಮೀಟರ್) ದೂರದಲ್ಲಿದೆ.

ನಡು ಸಮುದ್ರದಲ್ಲಿ ಅವರು ಮೃತಪಟ್ಟಿದ್ದರಿಂದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿ ಬಂದಿದ್ದರ ಹಿನ್ನೆಲೆಯಲ್ಲಿ ಐಎನ್‌ಎಸ್ ಸುಮೇಧಾವನ್ನು ಗಲ್ಫ್ ಆಫ್ ಏಡನ್‌ನಿಂದ ಭಾರತಕ್ಕೆ ಹೊರಡಿಸಲಾಗಿತ್ತು.

ಮೃತ ಅಧಿಕಾರಿಯ ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್ ಮೂಲಕ ಹರಿಯಾಣಕ್ಕೆ ಕೊಂಡೊಯ್ಯಲಾಯಿತು.  



Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಸಲ ಈ ಜಿಲ್ಲೆಯಲ್ಲಿ ಸಿಕ್ತು ಕೊರೊನಾ