Select Your Language

Notifications

webdunia
webdunia
webdunia
webdunia

ಹತ್ತು ದಿನದಿಂದ RTO ದಲ್ಲಿ ವಾಹನಸವಾರರಿಗೆ ಸಂಕಷ್ಟ

ಹತ್ತು ದಿನದಿಂದ RTO  ದಲ್ಲಿ ವಾಹನಸವಾರರಿಗೆ ಸಂಕಷ್ಟ
bangalore , ಗುರುವಾರ, 14 ಡಿಸೆಂಬರ್ 2023 (14:00 IST)
ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ದಿನದಿಂದ RTO  ದಲ್ಲಿ ವಾಹನಸವಾರರಿಗೆ ಸಂಕಷ್ಟ ಎದುರಾಗಿದೆ.ಸಾರಿಗೆ ಇಲಾಖೆ  ಕಚೇರಿಯಲ್ಲಿ ಆಫೀಸರ್ಸ್ ಏನ್ಮಾಡ್ತಿದ್ದಾರೆ.ಆರ್ ಟಿಓ ಕಚೇರಿಗಳಲ್ಲಿ ಡಿಎಲ್- ಆರ್ಸಿಗೆ ಸ್ಮಾರ್ಟ್ ಸಮಸ್ಯೆ ಎದುರಾಗಿದೆ.ಬೆಂಗಳೂರು ಆರ್ಟಿಓ ಕಚೇರಿಗಳಲ್ಲಿ  ಡಿಎಲ್-ಆರ್ಸಿ ಕಾರ್ಡ್ ,ಲೈಸೆನ್ಸ್ ಕಳೆದ ಹತ್ತು ದಿನದಿಂದ ಸಿಗ್ತಿಲ್ಲ.ಕೈಗೆ ಕಾರ್ಡ್ ಸಿಗದೇ ಮನೆ ಮುಂದೆ ಬೈಕ್, ಕಾರು ನಿಂತಿದೆ.ಆರ್ಟಿಓ ಕಚೇರಿಗಳಲ್ಲಿ ಚಾಲನಾ ಪರೀಕ್ಷೆ ಪಾಸ್ ಆದ್ರೂ ಡಿ ಎಲ್ ಸಿಗುತ್ತಿಲ್ಲ .
 
ಸ್ಮಾರ್ಡ್ ಕಾರ್ಡ್ ಗೆ ಟೆಕ್ನಿಕಲ್ ಸಮಸ್ಯೆ ತಲೆದೋರಿದೆ.ಸಾರಿಗೆ ಇಲಾಖೆ ಕಚೇರಿಗಳಲ್ಲಿ ಸ್ಮಾರ್ಡ್ ಕಾರ್ಡ್ ಗಳಿಗೆ ಸಕಾಲದಲ್ಲಿ ಚಿಪ್ ಪೂರೈಕೆಯಾಗ್ತಿಲ್ಲ .ಶೋ ರೂಂನಿಂದ ಹೊಸದಾಗಿ ವಾಹನ ಖರೀದಿಸಿದ್ರೂ ವಾಹನ ರಸ್ತೆಗಿಳಿಸದ ಸ್ಥಿತಿ ಇದೆ ಹೀಗಾಗಿ ಬೆಂಗಳೂರು ಆರ್ಟಿಓ ಕಚೇರಿಗಳಲ್ಲಿ ಅಧಿಕಾರಿಗಳ ವಿರುದ್ಧ ವಾಹನಸವಾರರು ಆಕ್ರೋಶ ಹೊರಹಾಕಿದ್ದಾರೆ.
 
ಬೆಂಗಳೂರಿಗೆ ಯಶವಂತಪುರ, ಜಯನಗರ,ಕಲ್ಯಾಣನಗರ,ಜಯನಗರ,ಕೆಆರ್ಪುರಂ,ಜ್ಣಾನಭಾರತಿ ಕೆಆರ್ ಪುರಂ,ರಾಜಾಜಿನಗರ ಸೇರಿ ಇತರೆ ಆರ್ಟಿಓ ಕಚೇರಿಗಳಲ್ಲಿ ಸ್ಮಾರ್ಟ್ ಕಾರ್ಡ್ದೇ ಟೆನ್ಷನ್ ಆಗಿದೆ.ರೋಸ್ ಮಾರ್ಟ್ ಕಂಪನಿಗೆ ಸ್ಮಾರ್ಟ್ ಕಾರ್ಡ್ ಪೂರೈಕೆ ಟೆಂಡರ್  ಸಾರಿಗೆ ಇಲಾಖೆ ನೀಡಿದೆ.ಆದ್ರೆ ಸಮರ್ಪಕ ವಾಗಿ ಸ್ಮಾರ್ಡ್ ಕಾರ್ಡ್ ಪೂರೈಕೆ ಮಾಡ್ತಿಲ್ಲ.ಜೊತೆಗೆ ಇರೋ ಸ್ಮಾರ್ಡ್ ಕಾರ್ಡ್ ಗಳಲ್ಲಿ ಪದೇ ಟೆಕ್ನಿಕಲ್ ಸಮಸ್ಯೆಯಾಗಿದೆ.ಕಳೆದ ಹತ್ತು ದಿನದಿಂದ ಆರ್ಟಿಓ ಕಚೇರಿಗಳಲ್ಲಿ ಜನ ಪರದಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ರೇಪ್ ಎಸಗಿದ ಆರೋಪಿ ಬಂಧನ