Publish Date: Wed, 23 Oct 2019 (19:20 IST)
Updated Date: Wed, 23 Oct 2019 (19:25 IST)
ಟಿಪ್ಪು ಸುಲ್ತಾನ್ ವಿಷಯ ಸರಕಾರಿ ಶಾಲೆಗಳ ಪಠ್ಯದಿಂದ ರಾಜ್ಯ ಸರಕಾರ ತೆಗೆದುಹಾಕುತ್ತಾ?
ಹೀಗಂತ ಚರ್ಚೆಗಳು ನಡೆದಿರೋವಾಗಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಹೊಸ ಬಾಂಬ್ ಸ್ಫೋಟಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ರು.
ಕೃಷ್ಣಾ ನದಿಯಿಂದ ಪ್ರವಾಹಕ್ಕೆ ತುತ್ತಾಗಿ ನಡುಗಡ್ಡೆಯಾಗಿದ್ದ ನದಿ ಇಂಗಳಗಾಂವ ಗ್ರಾಮದಲ್ಲಿ ಪರಿಸ್ಥಿತಿ ಅವಲೋಕನ ಮಾಡಿದ್ರು.
ಶಿಥಿಲಗೊಂಡ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡದಂತೆ ಸೂಚನೆ ನೀಡಿ, ಈ ವಾರದಲ್ಲಿಯೇ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗುವುದು ಅಂತ ಹೇಳಿದ್ರು.
ಇದೇ ವೇಳೆ, ಶಾಸ ಅಪ್ಪಚ್ಚು ರಂಜನ್ ಅವರು ಟಿಪ್ಪು ಸುಲ್ತಾನ್ ಪಾಠವನ್ನ ಪಠ್ಯದಿಂದ ತೆಗೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರ ಪತ್ರ ಇನ್ನೂ ತಲುಪಿಲ್ಲ, ಪತ್ರ ತಲುಪಿದ ನಂತರ ತಾನು ಏನು ಮಾಡುತ್ತೇನೆ ನೋಡಿ.
ಟಿಪ್ಪು ಸುಲ್ತಾನ್ ವಿಷಯ ಪಠ್ಯದಿಂದ ತೆಗೆಯುವ ನಿಟ್ಟಿನಲ್ಲಿ ಏನು ನಿರ್ಧಾರ ಕೈಗೊಳ್ಳುವೆ ಅನ್ನೋದನ್ನ ಕಾಯ್ದು ನೋಡಿ ಅಂತ ಸಚಿವ ಸುರೇಶಕುಮಾರ್ ಹೇಳಿದ್ದಾರೆ.