Daily Horoscope

Select Your Language

Notifications

webdunia
webdunia
webdunia
webdunia

JDS ಅಭ್ಯರ್ಥಿಗಳನ್ನ ನೋಡಿ ಜನ ಮತ ಹಾಕಿಲ್ಲ ಎಂದವರಾರು?

ಜೆಡಿಎಸ್
ಮಂಡ್ಯದಲ್ಲಿ JDS ಅಭ್ಯರ್ಥಿಗಳನ್ನ ನೋಡಿ ಜನ ಮತ ಹಾಕಿಲ್ಲ ಎಂದು ಕಾಂಗ್ರೆಸ್ ಮುಖಂಡ ಹೇಳಿಕೆ ನೀಡಿದ್ದಾರೆ.
ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ.ಬಿ.ಚಂದ್ರಶೇಖರ್ ಈ ಹೇಳಿಕೆ ನೀಡಿದ್ದು,
ಮಂಡ್ಯ ಜನ ಮತ ಹಾಕಿರೋದು ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ ನೋಡಿ ಎಂದಿದ್ದಾರೆ.

ಚುನಾವಣಾ ಪೂರ್ವದಲ್ಲಿ ಗರ್ಭಿಣಿಯರು, ವೃದ್ಧರಿಗೆ, ಸ್ತ್ರೀ ಶಕ್ತಿಗಳಿಗೆ ಹಣ ಮೀಸಲು ಹಾಗೂ ರೈತರ ಸಾಲ ಮನ್ನಾ ಮಾಡ್ತಾರೆ ಅಂತ ಮತ ಕೊಟ್ಟಿದ್ದಾರೆ. JDS ಆಶ್ವಾಸನೆಗಳಿಗೆ ಮಂಡ್ಯದ ಮುಗ್ಧ ಜನರು ಮರುಳಾಗಿ ಮತ ಹಾಕಿದ್ದಾರೆ.
ಕೆ.ಆರ್.ಪೇಟೆ ಕ್ಷೇತ್ರದ JDS ಶಾಸಕ ನಾರಾಯಣಗೌಡ ಕೇವಲ ನೂರು ಹಳ್ಳಿಗೆ ಪ್ರಚಾರಕ್ಕೆ ಹೋಗಿಲ್ಲ
ಇವ್ನನ್ನ ನಿಲ್ಸಿದ್ರೆ ಜನ ಮತ ಹಾಕ್ತಾರಾ? ಎಂದು ಟೀಕೆ ಮಾಡಿದರು.  

ದೇವೇಗೌಡ, ಕುಮಾರಸ್ವಾಮಿ ನೋಡಿ ಜನ ಮತ ಕೊಟ್ಟಿದ್ದಾರೆ. ನಾರಾಯಣಗೌಡರ ಮುಖಕ್ಕೆ ಜನ ಮತ ಕೊಡ್ತಾರಾ?
ಕುಮಾರಸ್ವಾಮಿ ಅವರ ಆಶ್ವಾಸನೆ ಈಡೇರಿಸಲು ನಮ್ಮ ಬೆಂಬಲ ಇದೆ. ಕಾಂಗ್ರೆಸ್ ಸರ್ಕಾರ‌ ಅಧಿಕಾರ ಇದ್ದಾಗ ಎಸ್.ಎಂ.ಕೃಷ್ಣ, ಅಂಬರೀಶ್, ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆಗೆ ಜೆಡಿಎಸ್ ಗಿಂತಲೂ ಹೆಚ್ವು ಕೊಡುಗೆ ನೀಡಿದ್ದಾರೆ ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ದೋಸ್ತಿ ಸರ್ಕಾರದ್ದು ಗಂಡ ಹೆಂಡತಿ ಕಚ್ಚಾಟವಂತೆ!