Select Your Language

Notifications

webdunia
webdunia
webdunia
Sunday, 13 April 2025
webdunia

ದೋಸ್ತಿ ಸರ್ಕಾರದ್ದು ಗಂಡ ಹೆಂಡತಿ ಕಚ್ಚಾಟವಂತೆ!

ಬಿಜೆಪಿ
ಹಾಸನ , ಭಾನುವಾರ, 3 ಫೆಬ್ರವರಿ 2019 (18:08 IST)
ದೋಸ್ತಿ ಸರ್ಕಾರದ್ದು ಗಂಡ ಹೆಂಡತಿ ಕಚ್ಚಾಟ. ಇವರು ಒಂದಾಗಲ್ಲ. ಡೈವರ್ಸ್ ಆಗಲು ಇವರಿಗೆ ಹೆಚ್ಚುದಿನ‌ ಬೇಕಿಲ್ಲ ಎಂದು ಬಿಜೆಪಿ ಮುಖಂಡ ಹೇಳಿದ್ದಾರೆ.

ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಸಿ‌ಎಂ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ತನ್ನ ವೈಫಲ್ಯಗಳಿಂದ ಬಚಾವಾಗಲು ಅವರಿಗುಳಿದಿರೋದು ರಾಜೀನಾಮೆ ಒಂದೇ ದಾರಿ. ಹಾಸನ ಕ್ಷೇತ್ರ ಜೆಡಿಎಸ್  ಕುಟುಂಬಕ್ಕೆ ಮೀಸಲಾಗಿದೆ. ಪ್ರತಿಭಾವಂತ, ಯುವಕರಿಗೆ ಬೆಳೆಯೋಕೆ ಅವಕಾಶ ಕಲ್ಪಿಸುತ್ತಿಲ್ಲ. ಇಂತಹ ಪ್ರಾಂತೀಯ ರಾಜರೆಲ್ಲಾ ಪ್ರಧಾನಿಗಳಾದರೇ ದೇಶದ ಕಥೆ ಏನಾಗಬಹುದು? ಎಂದು ಬಿಜೆಪಿಯ ಪ್ರಮುಖ ಬಿ.ಜೆ.ಪುಟ್ಟಸ್ವಾಮಿ ಟೀಕೆ ಮಾಡಿದರು.

ಮೈತ್ರಿ ಹಾಗೂ ಘಟಬಂಧನ ನರೇಂದ್ರ ಮೋದಿಗೆ ಸಮವಲ್ಲ, ಇವರು ಏನೇ ಮಾಡಿದ್ರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ವು ಸ್ಥಾನ ಪಡೆಯೋದು ನಿಶ್ಚಿತ ಎಂದರು.

ಹಾಸನದಲ್ಲಿ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿಕೆ ನೀಡಿದ್ದು, ನಾವು ಆಪರೇಷನ್ ಮಾಡ್ತಿಲ್ಲ ಕಾಂಗ್ರೆಸ್ ಗೆ ಅವರ ಶಾಸಕರನ್ನು ಭದ್ರವಾಗಿ ಇಟ್ಟುಕೊಳ್ಳಲು ಆಗುತ್ತಿಲ್ಲ. 7ತಿಂಗಳಿಂದ ರಾಜ್ಯದಲ್ಲಿ ಸರ್ಕಾರ ಇದೆಯೇ ಎಂಬ ಅನುಮಾನ ಮೂಡಿದೆ ಎಂದರು.

ದಿನ ಬೆಳಗಾದ್ರೆ ಹಾಸನದಲ್ಲೊಬ್ಬ ಮೊಮ್ಮಗನ ನಿಲ್ಲುಸ್ತೀನಿ, ಮಂಡ್ಯದಲ್ಲೊಬ್ಬನ್ನ ನಿಲುಸ್ತೀನಿ ಎನ್ನುತ್ತಾರೆ. ಕುಟುಂಬ ರಾಜಕಾರಣ ಬಿಟ್ಟು ರಾಜ್ಯದ ಚಿಂತೆ ಇವರಿಗೆ ಇಲ್ಲ ಎಂದು ದೇವೇಗೌಡರ ಕುಟುಂಬದ ವಿರುದ್ಧ ಬಿ.ಜೆ ಪುಟ್ಟಸ್ವಾಮಿ ಕಿಡಿಕಾರಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸೋದೇ ಅನುಮಾನ- ಆರ್. ಅಶೋಕ್