Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ನೋಡುವ ಜತೆಗೆ ಮತ್ತೊಂದು ಆಸೆ ಹೊರ ಹಾಕಿದ ಕಿಚ್ಚ ಸುದೀಪ್!

ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ನೋಡುವ ಜತೆಗೆ ಮತ್ತೊಂದು ಆಸೆ ಹೊರ ಹಾಕಿದ ಕಿಚ್ಚ ಸುದೀಪ್!
ಬೆಂಗಳೂರು , ಶನಿವಾರ, 2 ಫೆಬ್ರವರಿ 2019 (09:31 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಸಿನಿಮಾ ಫಸ್ಟ್ ಲುಕ್ ನೋಡಿ ಕಿಚ್ಚ ಸುದೀಪ್ ಖಷಿಯಾಗಿದ್ದು, ಟ್ವೀಟ್ ಮುಖಾಂತರ ಅಭಿನಂದಿಸಿದ್ದಾರೆ.


ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾವನ್ನು ನೋಡಲು ಎದಿರು ನೋಡುತ್ತಿರುವುದಾಗಿ ಹೇಳಿಕೊಂಡಿರುವ ಸುದೀಪ್ ಅದರ ಜತೆಗೆ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಬಳಿ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ.

ಸಿನಿಮಾ ಜತೆಗೆ ಗಣೇಶ್ ಪತ್ನಿ ಶಿಲ್ಪಾ ತಯಾರು ಮಾಡುವ ಖಾದ್ಯವೊಂದನ್ನು ಸೇವಿಸಬೇಕು ಮತ್ತು ಗಣೇಶ್ ಸ್ನೇಹಿತ ನಟ ರವಿಶಂಕರ್ ಗೌಡ ಒಟ್ಟಾಗಿ ಸೇರಿಕೊಂಡು ಪಾರ್ಟಿ ಮಾಡಬೇಕು ಎಂದು ಕಿಚ್ಚ ಬೇಡಿಕೆ ಮುಂದಿಟ್ಟಿದ್ದಾರೆ. ಇದನ್ನು ನೋಡಿ ಶಿಲ್ಪಾ ಗಣೇಶ್ ಕೂಡಾ ಪ್ರತಿಕ್ರಿಯಿಸಿದ್ದು, ಸುದೀಪ್ ಗೆ ಪಾರ್ಟಿಗೆ ಆಹ್ವಾನಿಸಿದ್ದಾರೆ. ಕಿಚ್ಚ ಕೂಡಾ ಆಹ್ವಾನವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಯಾರಿಗೆಲ್ಲಾ ನನ್ನ ಕಂಡ್ರಾಗಲ್ಲ ಸಾಕ್ಷಿ ಕೊಡಿ ನೋಡೋಣ: ರಶ್ಮಿಕಾ ಮಂದಣ್ಣ ಸವಾಲು