Select Your Language

Notifications

webdunia
webdunia
webdunia
webdunia

ಡಿಪಿ ಬದಲಿಸಿ ಗಮನ ಸೆಳೆದ ಧೋನಿ

Dhoni caught attention by changing DP
bangalore , ಶನಿವಾರ, 13 ಆಗಸ್ಟ್ 2022 (21:11 IST)
ಇಡೀ ದೇಶವೇ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮಾಚರಣೆಯಲ್ಲಿದೆ. ಇಡೀ ದೇಶವೇ ಒಂದು ರೀತಿ ತ್ರಿವರ್ಣದಲ್ಲಿ ಕಂಗೊಳಿಸುತ್ತಿದೆ. ಈಗ ದೇಶದ ಪ್ರತಿ ಮನೆಗಳಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತಿದೆ. ದೇಶಭಕ್ತಿ ಗೀತೆಗಳು ಎಲ್ಲೆಲ್ಲೂ ಮೊಳಗುತ್ತಿವೆ. 75ನೇ ಈ ಸ್ವಾತಂತ್ರ್ಯ ಸಂಭ್ರಮಾಚರಣೆಗೆ ದೇಶದಾದ್ಯಂತ ಹೊಸ ಸಂಚಲನ ಮೂಡಿಸಿದೆ. ಇದೆಲ್ಲದರ ನಡುವೆ ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಖಾತೆಯ ಡಿಪಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಪೋಸ್ಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ..ಟೀಂ ಇಂಡಿಯಾ ಮಾಜಿ ನಾಯಕ M.S.ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇನೂ ಸಕ್ರಿಯವಾಗಿರುವ ವ್ಯಕ್ತಿಯಲ್ಲ. ಆದರೆ ಇದೀಗ ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಹೊಸ್ತಿಲಲ್ಲಿರುವಾಗ ಧೋನಿ ತಮ್ಮ ಡಿಪಿ ಬದಲಿಸುವ ಮೂಲಕ ಮಹತ್ತರ ಸಂದೇಶವನ್ನು ಸಾರಿದ್ದಾರೆ. ಹೌದು, ಧೋನಿ ಭಾರತದ ಬಾವುಟದ ಜತೆಗೆ ನಾನು ಭಾರತೀಯನಾಗಿ ಹುಟ್ಟಿದ್ದೇ ಒಂದು ಭಾಗ್ಯ ಎಂದು ಸಂಸ್ಕೃತ, ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾರಿ ಹರಿದು ಕುರಿಗಾಹಿ ಸೇರಿ 18 ಕುರಿಗಳ ಸಾವು