Publish Date: Sat, 13 Aug 2022 (21:07 IST)
Updated Date: Sat, 13 Aug 2022 (21:11 IST)
ಕೊಪ್ಪಳದ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆ ಬಳಿ ಟ್ಯಾಂಕರ್ ಹರಿದು ಸ್ಥಳದಲ್ಲೇ ಕುರಿಗಾಹಿ ಮತ್ತು 18 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಚಿಕ್ಕೋಡಿ ಮೂಲದ ಯಲ್ಲಪ್ಪ ಬಸಪ್ಪ ಚಿಗರಿ ಎಂಬುವರು ಬೆಳಗಿನ ಜಾವ ಕುರಿಗಳನ್ನು ಕರೆದುಕೊಂಡು ಹೋಗುವಾಗ ಲಾರಿ ಹರಿದಿದೆ..ಲಾರಿ ಹರಿದ ರಭಸಕ್ಕೆ ಬಸಪ್ಪ ಹಾಗೂ 18 ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ಯಾಂಕರ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.