Publish Date: Wed, 30 Oct 2019 (18:49 IST)
Updated Date: Wed, 30 Oct 2019 (18:50 IST)
ಕೆಂಡ ಹಾಯುವಾಗ ಭಕ್ತರು ದೇವರು ಸಹಿತವಾಗಿ ಕೆಂಡಕ್ಕೆ ಬಿದ್ದ ಘಟನೆ ನಡೆದಿದೆ.
ಕೋಟೆನಾಡಲ್ಲಿ ಕೆಂಡ ಹಾಯುವಾಗ ಮತ್ತೊಂದು ದುರಂತ ಸಂಭವಿಸಿದೆ. ಸಂಜೆ ಕೆಂಡ ಹಾಯುವಾಗ ದೇವರು ಸಮೇತ ಕೆಂಡಕ್ಕೆ ಬಿದ್ದಿದ್ದಾರೆ ಭಕ್ತರು.
ಚಿತ್ರದುರ್ಗ ಜಿಲ್ಲೆಯ ಮಾಡನಾಯಕನಹಳ್ಳಿಯಲ್ಲಿ ಘಟನೆ ನಡೆದಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಕೆಂಡ ಹಾಯುವ ಕಾರ್ಯಕ್ರಮವಿತ್ತು. ಕೊಲ್ಲಪುರದಮ್ಮ ದೇವಿಯ ಜಾತ್ರಾ ಮಹೋತ್ಸವ ಹಿನ್ನೆಲೆ ಕೆಂಡ ಹಾಯಲಾಗುತ್ತಿತ್ತು.
ಕೆಂಡ ಹಾಯುವಾಗ ದೇವರು ಸಮೇತ ಕೆಂಡಕ್ಕೆ ಬಿದ್ದಿದ್ದಾರೆ ಭಕ್ತರು. ಘಟನೆಯಲ್ಲಿ ಮೂರು ಜನರಿಗೆ ಗಾಯಗಳಾಗಿವೆ.
ಮೂರ್ತಿ, ಮಲ್ಲಿಕಾರ್ಜುನ, ಧನಂಜಯ ಎಂಬುವವರಿಗೆ ಸುಟ್ಟ ಗಾಯಗಳಾಗಿವೆ.
ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.