Publish Date: Sat, 19 Oct 2019 (09:16 IST)
Updated Date: Sat, 19 Oct 2019 (09:18 IST)
ಬೆಂಗಳೂರು : ನಿಮ್ಮ ಕುಟುಂಬಕ್ಕೆ ಒಳ್ಳೆದಾಗಲಿ ಎಂದು ನೀವು ದೇವರಿಗೆ ನಿಂಬೆ ಹಣ್ಣಿನ ದೀಪವನ್ನು ಹಚ್ಚುತ್ತೀರಿ. ಆದರೆ ಈ ದೇವರಿಗೆ ಅಪ್ಪಿತಪ್ಪಿಯೂ ನಿಂಬೆ ಹಣ್ಣಿನ ದೀಪವನ್ನು ಬೆಳಗಬೇಡಿ.
ನಿಂಬೆ ಹಣ್ಣು ಶಕ್ತಿ ಸ್ವರೂಪಿಣಿಯಾದ ಪಾರ್ವತಿ ದೇವಿಗೆ ತುಂಬಾ ಇಷ್ಟ. ಆದ್ದರಿಂದ ಪಾರ್ವತಿದೇವಿಯ ಅವತಾರವಾದ ದೇವಿಯರಿಗೆ ಮಾತ್ರ ನಿಂಬೆ ಹಣ್ಣಿನ ದೀಪ ಅಥವಾ ನಿಂಬೆ ಹಣ್ಣಿನ ಹಾರವನ್ನು ಹಾಕಿ.
ಆದರೆ ಮಹಾಲಕ್ಷ್ಮೀಗೆ ಅಥವಾ ಸರಸ್ವತಿ ದೇವಿಗೆ ನಿಂಬೆ ಹಣ್ಣಿನ ದೀಪವನ್ನು ಬೆಳಗಬೇಡಿ. ಒಂದು ವೇಳೆ ಬೆಳಗಿದರೆ ಆ ಮನೆಯಲ್ಲಿ ಸುಖ, ಸಂತೋಷ ಇರುವುದಿಲ್ಲ. ಸಂಸಾರದಲ್ಲಿ ಯಾವಾಗಲೂ ಕಲಹಗಳು ಜಗಳಗಳು ನಡೆಯುತ್ತದೆ. ಮನೆಯಲ್ಲಿ ಆರ್ಥಿಕ ನಷ್ಟ, ಸಾವು ನೋವಾಗುತ್ತದೆ.