Publish Date: Sat, 10 Nov 2018 (16:32 IST)
Updated Date: Sat, 10 Nov 2018 (16:34 IST)
ಕೀಲಿ ಹಾಕಿದ ಮನೆ ಹಾಗೂ ರಾತ್ರಿ ವೇಳೆ ಮನೆ ದರೋಡೆ ಮಾಡುತ್ತಿದ್ದ ಮನೆಗಳ್ಳರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡದ ವಿದ್ಯಾಗಿರಿ ಪೋಲಿಸರು ಕಾರ್ಯಚರಣೆ ನಡೆಸಿ ಇಬ್ಬರು ಮನೆಗಳ್ಳರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ರುದ್ರಪ್ಪ ದೇಶನೂರ, ಅಶೋಕ ಸುಣಗಾರ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ 60 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ನಗರದ ಕೆಲವು ಕಡೆ ತಮ್ಮ ಕೈಚಳಕ ತೋರಿದ್ದ ಖದೀಮರನ್ನು ಪೊಲೀಸರು ಬಂಧನ ಮಾಡಿದ್ದಾರೆ.