ಮಳೆ ಹಾಗೂ ಪ್ರವಾಹದಿಂದ ರಾಜ್ಯದ ರಸ್ತೆಗಳು ಹಾನಿಗೊಳಗಾಗಿದ್ದು, ದುರಸ್ತಿ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ 310 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ರಸ್ತೆ ಹಾಗೂ ಮೂಲಸೌಕರ್ಯಗಳು ಸೇರಿ ಸುಮಾರು 7 ಸಾವಿರ ಕಿ.ಮೀ. ರಸ್ತೆ ಹಾಳಾಗಿದೆ. ಅದರಲ್ಲಿ 4850 ಕಿಮೀ. ಜಿಲ್ಲೆಯೊಳಗಿನ ರಸ್ತೆಗಳಾದರೆ, 2236 ಕಿ.ಮೀ ರಾಜ್ಯದ ಹೆದ್ದಾರಿ
1500ಕ್ಕೂ ಅಧಿಕ ಸೇತುವೆಗಳು ಕೊಚ್ಚಿಹೋಗಿವೆ. ಇದೀಗ ಇದರ ದುರಸ್ತಿ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಈ ದುರಸ್ತಿಗೆ ಸುಮಾರು 730 ಕೋಟಿ. ರೂ. ಗಳ ಅಗತ್ಯವಿದೆ.
ಉತ್ತರ ವಲಯಕ್ಕೆ 230 ಕೋಟಿ ರೂ. ಕೇಂದ್ರ ವಲಯಕ್ಕೆ 38 ಲಫಟೊ ರೂ. ಈಶಾನ್ಯಕ್ಕೆ 15 ಕೋಟಿ ರೂ. ದಕ್ಷಿಣ ವಲಯಕ್ಕೆ 45 ಕೋಟಿ ರೂ. ಮಂಜೂರು ಮಾಡಿದರು. ಒಟ್ಟು ಕಾರ್ಯಗತಗೊಂಡಿರುವ 766 ಯೋಜನೆಗಳಿಗೆ 310 ಕೋಟಿ ರೂ. ಮಂಜೂರು ಮಾಡಿದರು.
ಇನ್ನು ಹಾನಿಗೊಳಗಾದ ಕರಾವಳಿ ಪ್ರದೇಶದ ಸೇತುವೆಗಳ ಕಾಮಗಾರಿಗೆ ಬಜೆಟ್ ನಲ್ಲಿ ಮೀಸಲಿಟ್ಟ 200 ಕೋಟಿ ರೂ. ಎಂದು ವರದಿ.