Select Your Language

Notifications

webdunia
webdunia
webdunia
webdunia

ಡೆಂಗ್ಯೂ ಜ್ವರ ಹೆಚ್ಚಳ ಕಾರಣ: ಬೆಂಗಳೂರಿನಲ್ಲಿ ಪ್ಲೇಟ್ ಲೆಟ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

Blood

Krishnaveni K

ಬೆಂಗಳೂರು , ಬುಧವಾರ, 3 ಜುಲೈ 2024 (11:11 IST)
Photo Credit: X
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಜ್ವರ ಹಾವಳಿ ಜೋರಾಗಿದೆ. ಪ್ರತೀ ಗಂಟೆಗೆ ಎರಡು ಮಂದಿಯಂತೆ ಡೆಂಗ್ಯೂ ಪೀಡಿತರಾಗುತ್ತಿದ್ದಾರೆ. ಹೀಗಾಗಿ ಪ್ಲೇಟ್ ಲೆಟ್ ಗೂ ಬೇಡಿಕೆ ಹೆಚ್ಚಾಗಿದೆ.

ಡೆಂಗ್ಯೂ ಪೀಡಿತರು ಮುಖ್ಯವಾಗಿ ರಕ್ತದಲ್ಲಿ ಪ್ಲೇಟ್ ಲೆಟ್ ಗಳ ಸಂಖ್ಯೆ ಕೊರತೆಯಿಂದ ಬಳಲುತ್ತಾರೆ. ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ಲೇಟ್ ಲೆಟ್ ಗಳು ಇಲ್ಲದೇ ಹೋದರೆ ಮಾರಣಾಂತಿಕವಾಗಬಹುದು. ಹೀಗಾಗಿ ಇದಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ.

ಆದರೆ ಮಳೆ ಬಿದ್ದ ಮೇಲೆ ಡೆಂಗ್ಯೂ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಬೆಂಗಳೂರಿಗರ ಆತಂಕ ಹೆಚ್ಚಿಸಿದೆ. ರೋಗ ನಿರೋಧಕ ಶಕ್ತಿ ಮರಳಬೇಕೆಂದರೆ ಪ್ಲೇಟ್ ಲೆಟ್ ಗಳ ಸಂಖ್ಯೆ ಹೆಚ್ಚಾಗಬೇಕು. ಹೀಗಾಗಿ ಬ್ಲಡ್ ಬ್ಯಾಂಕ್ ಗಳಲ್ಲಿ ಪ್ಲೇಟ್ ಲೆಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಪ್ರತಿನಿತ್ಯ 50 ರಿಂದ 60 ಯೂನಿಟ್ ಪ್ಲೇಟ್ ಲೆಟ್ ಗಳಿಗೆ ಬೇಡಿಕೆ ಕಂಡುಬರುತ್ತಿದೆ. ಹೀಗಾಗಿ ದಾನಿಗಳಿಂದ ರಕ್ತ ಸಂಗ್ರಹಿಸಿ ಪ್ಲೇಟ್ ಲೆಟ್ ಗೆ ವ್ಯವಸ್ಥೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಆದಷ್ಟು ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಿ ಎಂದು ಕರೆ ನೀಡಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

4 ತಿಂಗಳಿಗೊಮ್ಮೆ ಎಚ್ಐವಿ ಟೆಸ್ಟ್: ಏನಿದು ಪ್ರಜ್ವಲ್ ರೇವಣ್ಣ ಕತೆ