Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಕೊರೊನಾ ಬೆನ್ನಲ್ಲೇ ಡೆಂಗ್ಯೂ ಆತಂಕ

ರಾಜ್ಯದಲ್ಲಿ ಕೊರೊನಾ ಬೆನ್ನಲ್ಲೇ ಡೆಂಗ್ಯೂ ಆತಂಕ
bangalore , ಭಾನುವಾರ, 26 ಜೂನ್ 2022 (21:24 IST)
ರಾಜ್ಯದಲ್ಲಿ ಕೊರೊನಾ ಬೆನ್ನಲ್ಲೇ ಡೆಂಗ್ಯೂ ಆತಂಕ ಶುರುವಾಗಿದ್ದು, ಈ ತಿಂಗಳಲ್ಲಿ 544 ಮಂದಿಗೆ ಡೆಂಗ್ಯೂ ಜ್ವರ ಪತ್ತೆಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2,258 ಕ್ಕೆ ಏರಿಕೆಯಾಗಿದೆ. ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಜನರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದ್ದು, ಬಿಬಿಎಂಪಿಯಲ್ಲಿ 388, ಉಡುಪಿ 256, ಮೈಸೂರು 203, ದಕ್ಷಿಣ ಕನ್ನಡ 128, ಚಿತ್ರದುರ್ಗ 116, ಶಿವಮೊಗ್ಗದಲ್ಲಿ 115 ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ವರ್ಷ 41,618 ಡೆಂಗ್ಯೂ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 18,348 ಮಂದಿಯ ರಕ್ಷ ಪರೀಕ್ಷೆ ನಡೆಸಲಾಗಿದೆ. 2,258 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಆದರೆ ಸಾವು ಸಂಭವಿಸಿಲ್ಲ. 2021 ರಲ್ಲಿ 7,189 ಮಂದಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಐವರು ಮೃತಪಟ್ಟಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯಿಂದ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ