ಕೊರೋನ ವೈರಸ್ ಮತ್ತೊಮ್ಮೆ ಸಿಡಿದೇಳಲು ಎಲ್ಲಾ ಪ್ರಯತ್ನ ಮಾಡ್ತಿದೆ. ಮೂರನೇ ಅಲೆಯಲ್ಲಿ ಸೈಲೆಂಟ್ ಆಗಿ ಬಂದು ಮರೆಯಾದ ಚೀನಿ ವೈರಸ್, 4ನೇ ಅಲೆ ಎಂಟ್ರಿಗೆ ಹೊಂಚು ಹಾಕ್ತಿದೆ. ಅತಿ ಹೆಚ್ಚು ಸಾಫ್ಟ್ವೇರ್ ಕಂಪನಿಗಳಿರುವ ಮಹದೇವಪುರದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗ್ತಿದೆ. ಇದರಿಂದ ಟೆಕ್ಕಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಕೋವಿಡ್ ಕೇಸ್ ಏರಿಕೆಗೆ ಕಾರಣ ವರ್ಕ್ ಫ್ರಂ ಹೋಮ್ ಮುಗಿಸಿ ಟೆಕ್ಕಿಗಳು ಕಂಪನಿಗಳತ್ತ ಮುಖ ಮಾಡಿದ್ದಾರೆ. ಇದರಿಂದ ಕೊರೋನ ವೈರಸ್ ದಿನದಿಂದ ದಿನಕ್ಕೆ ಮಹದೇವಪುರದಲ್ಲಿ ಹೆಚ್ಚಾಗ್ತಿದೆ ಅಂತ ಆರೋಗ್ಯ ಇಲಾಖೆ ಅತಂಕ ವ್ಯಕ್ತಪಡಿಸಿದೆ ,ಪಾಸಿಟಿವ್ ಆದ ಭಾಗಶಃ ಜನ ಎ ಸಿಂಟಮೆಟಿಕ್ ಆಗಿರೋದ್ರಿಂದ ಸದ್ಯದ ಮಟ್ಟಿಗೆ ಯಾವುದೇ ಭಯವಿಲ್ಲ ಎಂದು ಬಿಬಿಎಂಪಿ ಆರೋಗ್ಯ ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ.