Publish Date: Wed, 03 Oct 2018 (15:20 IST)
Updated Date: Wed, 03 Oct 2018 (15:22 IST)
ಕಲಬುರ್ಗಿ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಕೊಡಬೇಕೆಂದು ಹೈಕಮಾಂಡ್ ಗಮನಕ್ಕ ತರಲಾಗಿದೆ ಎಂದು ಸಚಿವ ತಿಳಿಸಿದ್ದಾರೆ.
ಹೈ ಕಮಾಂಡ್ ಗಮನಕ್ಕೆ ಕಲಬುರಗಿಗೆ ಇನ್ನೊಂದು ಸಚಿವ ಸ್ಥಾನ ಕೊಡಬೇಕೆಂಬ ಎಂಬ ವಿಷಯ ತರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಕಲಬುರ್ಗಿಯಲ್ಲಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರ್ಗಿ ಜಿಲ್ಲೆ ಅತ್ಯಂತ ದೊಡ್ಡ ಜಿಲ್ಲೆ. ಹಾಗಾಗಿ ನಮ್ಮ ಜಿಲ್ಲೆಗೆ ಇನ್ನೊಬ್ಬರಿಗೆ ಸಚಿವಸ್ಥಾನ ಕೊಡಬೇಕು ಎಂದು ನಾನು, ಶಾಸಕ ಉಮೇಶ ಜಾದವ, ಶಾಸಕ ಅಜಯಸಿಂಗ್ ಸೇರಿ ಎಲ್ಲರೂ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ.
ಇನ್ನೊಬ್ಬರಿಗೆ ಸಚಿವಸ್ಥಾನ ಕೊಟ್ಟರೆ ಜಿಲ್ಲೆಯಲ್ಲಿ ಉತ್ತಮ ಕೆಲಸಗಳು ಆಗುತ್ತವೆ. ಮೂವರು ಶಾಸಕರಲ್ಲಿ ಯಾರಿಗೆ ಸಚಿವಸ್ಥಾನ ಕೊಟ್ಟರು ನಡೆಯುತ್ತದೆ ಎಂದು ಹೈ ಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.