Publish Date: Fri, 06 Mar 2020 (15:07 IST)
Updated Date: Fri, 06 Mar 2020 (15:08 IST)
ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಹಾಗೂ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯು ಇದೀಗ ಕೇಂದ್ರ ಗೃಹ ಸಚಿವರ ರಾಜೀನಾಮೆವರೆಗೆ ಬಂದು ನಿಂತಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಾಲ್ವತ್ತಕ್ಕೂ ಹೆಚ್ಚು ಜನರ ಸಾವನ್ನಪ್ಪಿದ್ದಾರೆ. ಈ ಗಲಭೆ ಹಾಗೂ ಘಟನೆಯ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು. ಹೀಗಂತ ಕಾಂಗ್ರೆಸ್ ಒತ್ತಾಯ ಮುಂದುವರಿಸಿದೆ.
ಲೋಕಸಭೆಯಲ್ಲಿ ನಡೆಯುತ್ತಿರುವ ಕಲಾಪದಲ್ಲಿ ಕೇಂದ್ರ ಸಚಿವ ಅಮಿತ್ ಶಾ ರಾಜೀನಾಮೆಗೆ ಪಟ್ಟು ಹಿಡಿದಿರೋ ಕಾಂಗ್ರೆಸ್ ನಾಯಕರು ಗದ್ದಲ ಮುಂದುವರಿಸಿದ ಪರಿಣಾಮ ಕಲಾಪಕ್ಕೆ ಅಡಚಣೆಯುಂಟಾಯಿತು.
ಕೈ ಪಾಳೆಯದ ಮುಖಂಡರ ಗದ್ದಲದ ಕಾರಣದಿಂದಾಗಿ ಕಲಾಪವನ್ನು ಮುಂದೂಡಿಕೆ ಮಾಡಲಾಯಿತು.
Jagadeesh
Publish Date: Fri, 06 Mar 2020 (15:07 IST)
Updated Date: Fri, 06 Mar 2020 (15:08 IST)