Publish Date: Fri, 21 Feb 2020 (07:26 IST)
Updated Date: Fri, 21 Feb 2020 (07:28 IST)
ಕಾರವಾರ : ಬೆಂಗಳೂರಿನಲ್ಲಿ ನಡೆದ ಸಿಎಎ ಹೋರಾಟ ಸಭೆಯಲ್ಲಿ ಯುವತಿಯೊಬ್ಬಳು ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಜೊತೆಗೆ ವೇದಿಕೆ ಮೇಲಿದ್ದ ಎಲ್ಲರ ಮೇಲೂ ದೇಶದ್ರೋಹದ ಕೇಸ್ ದಾಖಲಿಸುವಂತೆ ಸಂಸದ ಅನಂತ್ ಕುಮಾರ್ ಹೆಗಡೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಡಪಂಥೀಯ ವಿಚಾರ ದೇಶದ್ರೋಹ ವಿಚಾರವಾಗಿ ಮಾರ್ಪಟ್ಟಿದೆ. ಸಿಎಎ ಹೋರಾಟ ದೇಶದ್ರೋಹ ಹೋರಾಟವಾಗಿ, ದೇಶದ್ರೋಹ ಚಟುವಟಿಕೆಯಾಗಿ ಹಿಂದು ವಿರೋಧಿ ಹೋರಾಟವಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೇ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಜೊತೆ ವೇದಿಕೆ ಮೇಲಿದ್ದ ಎಲ್ಲರ ಮೇಲೆ ದೇಶದ್ರೋಹದ ಕೇಸ್ ದಾಖಲಿಸಿ ತಕ್ಷಣ ಬಂಧಿಸುವಂತೆ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.