Select Your Language

Notifications

webdunia
webdunia
webdunia
webdunia

ಪ್ರೀತಿಸಿ ವಿವಾಹವಾಗುವುದಾಗಿ ನಂಬಿಸಿ ಯುವತಿಗೆ ಮೋಸ

Deceived a young woman believing that she will fall in love and get married
bangalore , ಶನಿವಾರ, 3 ಜೂನ್ 2023 (19:41 IST)
ಪ್ರೀತಿಸಿ ಮಧುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿ ಪ್ರಿಯತಮೆಗೆ ಕೈ ಕೊಟ್ಟು ಪ್ರಿಯಕರ ಎಸ್ಕೇಪ್ ಆಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ ,ಬಾಗೇಪಲ್ಲಿ ತಾಲ್ಲೂಕಿನ ಜಂಗಾಲಹಳ್ಳಿ ಗ್ರಾಮದ ಅಂಜಲಿ ಗುಡಿಬಂಡೆ ತಾಲ್ಲೂಕಿನ ರಾಮೋಜಿಪಲ್ಲಿಯಲ್ಲಿರುವ ಸಂಭಂದಿಕರ ಮನೆಗೆ  ಜಾತ್ರೆಗೆ ಅಂತ  ಹೋಗಿದ್ದಳು ಅದೇ ಗ್ರಾಮದ  ನಿವಾಸಿ ವಿನೋದ  ಎಂಬ  ಯುವಕ ಪರಿಚಯವಾಗಿದ್ದ , ಪರಿಚರ  ಸ್ನೇಹವಾಗಿ  ಸ್ನೇಹ ಪ್ರೀತಿಯಾಗಿ ,ಪ್ರೀತಿ  ಸಲುಗೆಯಾಗಿ  ಬದಲಾಗಿ ,ಪೋಷಕರಿಗೆ ಗೊತ್ತಿಲ್ಲದೆ ಇಬ್ಬರು ಮೊಬೈಲ್ ನಲ್ಲಿ ಪಿಸುಪಿಸು ಮಾತನಾಡ್ತಿದ್ರು,ಕೆಲವು ದಿನಗಳು ಕಳೆದ ಬಳಿಕ ಒಂದು ದಿನ ಪ್ರಿಯತಮೆ ಗ್ರಾಮವಾದ ಜಂಗಾಲಹಳ್ಳಿ ಕೆರೆಯಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ,ವಿಚಾರ ತಿಳಿದ ಇಬ್ಬರ ಪೋಷಕರು ಪ್ರೇಮಿಗಳಿಬ್ಬರಿಗೂ ವಿವಾಹ ಮಾಡೋದಾಗಿ ಪಂಚಾಯ್ತಿಯಲ್ಲಿ ತೀರ್ಮಾನಿಸಿದ್ರಂತೆ, ಆದ್ರೆ ಯುಕನ ಪೋಷಕರು ಉಲ್ಟಾ ಹೊಡೆದಿದ್ದು ವಿವಾಹ ಮಾಡಲು ನಿರಾಕರಸಿ ಮೊಬೈಲ್ ಸ್ವಿಚ್ ಆಪ್ ಮಾಡಿದ್ರಂತೆ ಇದ್ರಿಂದ ಬೇಸತ್ತ ಪ್ರಿಯತಮೆ ತನ್ನ  ಪ್ರಿಯಕರ ಮೇಲೆ  ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾಳೆ ಆರೋಪಿಗೆ ಪ್ರೋತ್ಸಾಹ ನೀಡಿದ್ದ ಆರು ಜನ ಮೇಲೆ ದೂರು ದಾಖಲಿಸಿ ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾಳೆ ,ಇನ್ನು ದೂರು ದಾಖಲಿಸಿಕೊಂಡ ಪೊಲೀಸರು ಪ್ರಿಯತಮನ ಪತ್ತೆಗಾಗಿ ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಮಿಟಿಯ ವರದಿ ಬಂದ ನಂತರ ಎಲ್ಲ ಗೊತ್ತಾಗಲಿದೆ-ರೈಲ್ವೆ ವ್ಯವಸ್ಥಾಪಕರ ಪ್ರತಿಕ್ರಿಯೆ