Select Your Language

Notifications

webdunia
webdunia
webdunia
webdunia

ಠಾಣೆಯ 71 ಸಿಬ್ಬಂದಿಗಳನ್ನು ಒಂದೇ ಬಾರಿಗೆ ವರ್ಗಾವಣೆ ಮಾಡಿದ ಡಿಸಿಪಿ ಅಣ್ಣಾಮಲೈ. ಕಾರಣವೇನು ಗೊತ್ತಾ?

ಬೆಂಗಳೂರು
ಬೆಂಗಳೂರು , ಶನಿವಾರ, 2 ಫೆಬ್ರವರಿ 2019 (08:19 IST)
ಬೆಂಗಳೂರು : ಇತಿಹಾಸದಲ್ಲೇ ಮೊದಲ ಬಾರಿಗೆ ಕುಮಾರಸ್ವಾಮಿ ಲೇಔಟ್‌ ಪೋಲಿಸ್‌ ಠಾಣೆಯ 71 ಸಿಬ್ಬಂದಿಗಳನ್ನು ಒಂದೇ ಬಾರಿಗೆ ವರ್ಗಾವಣೆ ಮಾಡಿ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಭರ್ಜರಿ ಸರ್ಜರಿ ನಡೆಸಿದ್ದಾರೆ.


ಕುಮಾರಸ್ವಾಮಿ ಲೇಔಟ್‌ ಪೋಲಿಸ್‌ ಠಾಣೆಯಲ್ಲಿ ಗುಂಪುಗಾರಿಕೆ ಮಾಡುತ್ತಿದ್ದು, ಇತ್ತೀಚೆಗೆ ಪಿಎಸ್‌ ಐ ನರಸಿಂಹಯ್ಯ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾಗ ಮತ್ತೊಂದು ಗುಂಪು ವಿಡಿಯೋ ಮಾಡಿ ದೃಶ್ಯವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು ಹಾಗೂ ಮತ್ತೆ ಕೆಲವರು ಠಾಣೆಯಲ್ಲಿದ್ದ ರೈಫಲ್‌ಗಳನ್ನು ಬಚ್ಚಿಟ್ಟು ತಮಗಾಗದ ಪೇದೆಗಳ ಮೇಲೆ ಅಧಿಕಾರಿಗಳಿಗೆ ದೂರು ನೀಡುವ ಮೂಲಕ ಸಂಚು ರೂಪಿಸಿಕೊಳ್ಳುತ್ತಿದ್ದರು.


ಈ ಬಗ್ಗೆ ಅಣ್ಣಾಮಲೈ ಮಾಹಿತಿ ಸಿಕ್ಕಿದ್ದು, ಸಿಬ್ಬಂದಿಗಳ ಮಧ್ಯ ನಡೆಯುತ್ತಿದ್ದ ಒಳಜಗಳವನ್ನು ತಡೆಯುವ ನಿಟ್ಟಿನಲ್ಲಿ  ಶುಕ್ರವಾರದಂದು ಏಕಾಏಕಿ 71 ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಜೆಟ್ ನ್ನು 4 ವರ್ಷಗಳ ಹಿಂದೆಯೇ ಮೋದಿ ನೀಡದಿರುವುದಕ್ಕೆ ಕಾರಣವೇನು ಗೊತ್ತಾ?