ಬೆಂಗಳೂರು : ಕಾಮುಕನೊಬ್ಬ ಬುರ್ಖಾ ಧರಿಸಿ ಲೇಡಿಸ್ ಬಾತ್‍ರೂಂಗೆ ನುಗ್ಗಿದ ಘಟನೆ ಬೆಂಗಳೂರು ನಗರದ ಸಿಟಿ ರೈಲ್ವೆ ಸ್ಟೇಷನ್ ನಲ್ಲಿ ನಡೆದಿದೆ.
ಮದನ್ ಕುಮಾರ್ ಲೇಡಿಸ್ ಬಾತ್‍ರೂಮಿಗೆ ನುಗ್ಗಿದ್ದ ಕಾಮುಕ. ಈತ ಬೆಂಗಳೂರು ನಗರದ ಸಿಟಿ ರೈಲ್ವೆ ಸ್ಟೇಷನ್ ನಲ್ಲಿರುವ ಲೇಡಿಸ್ ಬಾತ್‍ರೂಂಗೆ ಬುರ್ಖಾ ಧರಿಸಿ ಮಹಿಳೆಯಂತೆ ಹೋಗಿದ್ದಾನೆ. ಆಗ ಆತ ಗಂಡಸು ಎಂಬುದನ್ನು ತಿಳಿದ ಮಹಿಳೆಯರು ಜೋರಾಗಿ ಕಿರುಚಿದ್ದಾರೆ.
ಸಾರ್ವಜನಿಕರು ಕಾಮುಕ ಮದನ್ ಕುಮಾರ್‍ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಟನ್ ಪೇಟೆ ಪೊಲೀಸರು ಸೈಕೋಪಾಥ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಬಗ್ಗೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.