Publish Date: Mon, 08 Jul 2019 (12:39 IST)
Updated Date: Mon, 08 Jul 2019 (12:41 IST)
ಬೆಂಗಳೂರು : ಬಿಜೆಪಿ ನಾಯಕರ ಜೊತೆಗೆ ರಾಜ್ಯಪಾಲರೂ ಕೂಡ ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಭಯ ಇದೆ ರಕ್ಷಣೆ ಕೊಡಿ ಎಂದು ಬರವಣಿಗೆಯಲ್ಲಿ ಕೊಟ್ಟಿದ್ದರೆ ಡಿಜಿ ಅವರಿಗೆ ಸೂಚನೆ ನೀಡಬಹುದಿತ್ತು. ಅದನ್ನು ಬಿಟ್ಟು ಪೊಲೀಸ್ ಆಯುಕ್ತರನ್ನು ಕರೆಸಿಕೊಂಡು ಅವರ ಜೊತೆಯಲ್ಲೇ ಕೂರಿಸಿಕೊಂಡು ಶಾಸಕರೊಂದಿಗೆ ರಾಜ್ಯಪಾಲರು 2 ಗಂಟೆ ಮಾತನಾಡುತ್ತೀರಿ ಎನ್ನುವುದಾದರೆ, ಕುದುರೆ ವ್ಯಾಪಾರಕ್ಕೆ ನೀವೇ ಕಾರಣೀಭೂತರು ಎಂದು ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿಯವರು ಸರ್ಕಾರ ಬೀಳಿಸಲು 6 ಬಾರಿ ಯತ್ನಿಸಿದ್ದಾರೆ. ಈಗಲೂ ದೆಹಲಿ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಸಭಾ ಸದಸ್ಯರಿಂದ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದ್ದು, ಶಾಸಕರು ಈ ವಿಮಾನದಲ್ಲಿಯೇ ಮುಂಬೈಗೆ ಹೋಗಿದ್ದಾರೆ. ಬಿಜೆಪಿಯವರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.