Publish Date: Mon, 18 Nov 2019 (16:08 IST)
Updated Date: Mon, 18 Nov 2019 (16:11 IST)
ನೂರಾರು ಜನರೆದುರು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕರಿಗೆ ಡಿಸಿಎಂ ಇರುಸು ಮುರುಸು ಉಂಟುಮಾಡಿರೋ ಘಟನೆ ನಡೆದಿದೆ.
ಡಿಸಿಎಂ ಲಕ್ಷ್ಮಣ ಸವದಿ ಪಕ್ಕ ಕುಳಿತುಕೊಳ್ಳಲು ಹೋಗಿ ಇರಿಸು ಮುರಿಸು ಅನುಭವಿಸಿದ್ದಾರೆ ಅನರ್ಹ ಶಾಸಕ ಕುಮಟಳ್ಳಿ. ಅಥಣಿಯ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿಗೆ ಕಾರ್ಯಕರ್ತರ ಎದುರೇ ಇರಿಸು ಮುರಿಸು ಅನುಭವಿಸಿದ್ದಾರೆ.
ಕಾರ್ ನಲ್ಲಿ ಕುಳಿತುಕೊಳ್ಳಲು ಬಂದ ಕುಮಟಳ್ಳಿಗೆ ಜಾಗ ಬಿಟ್ಟು ಕೊಡಲಿಲ್ಲ ಸವದಿ. ಕುಮಟಳ್ಳಿ ಕುಳಿತುಕೊಳ್ಳಲು ಬಂದಾಗ ತಿರುಗಿಯೂ ನೋಡದೇ ಕುಳಿತಿದ್ದರು ಸವದಿ.
ಬಳಿಕ ಮತ್ತೊಂದು ಬದಿಗೆ ಬಂದ ಕುಮಟಳ್ಳಿಗೆ ಜಾಗ ಬಿಟ್ಟು ಕೊಟ್ಟರು ಸಚಿವ ಸಿ.ಸಿ. ಪಾಟೀಲ. ಅಥಣಿಯ ತಹಸೀಲ್ದಾರ ಕಚೇರಿ ಎದುರು ನಡೆದ ಘಟನೆ ಇದಾಗಿದೆ.
ನಾಮಪತ್ರ ಸಲ್ಲಿಸಿ ವಾಪಸ್ ಹೋಗುವಾಗ ನಡೆದ ಘಟನೆ ಇದಾಗಿದ್ದು, ಕೆಲಕ್ಷಣ ಬಾಗಿಲ ಬಳಿ ನಿಂತರೂ ಪಕ್ಕಕ್ಕೆ ಸರಿಯದ ಸವದಿ ನಡೆ ಕುತೂಹಲ ಮೂಡಿಸಿತು.
ಇದರಿಂದಾಗಿ ಸವದಿ - ಕುಮಟಳ್ಳಿ ಹತ್ತಿರ ಹತ್ತಿರ ಅಂದರೂ ಒಳಗೊಳಗೆ ಮುನಿಸಿದೆಯಾ? ಎನ್ನುವ ಪ್ರಶ್ನೆ ಮೂಡಿಸಿದೆ ಈ ಪ್ರಸಂಗ.