Select Your Language

Notifications

webdunia
webdunia
webdunia
webdunia

ಡಿಸಿ ಸಹಿಯನ್ನೇ ನಕಲಿ ಮಾಡಿದ ಭೂಪನ ಮೇಲೆ ಬಿತ್ತು ಕೇಸ್!

ಡಿಸಿ ಸಹಿಯನ್ನೇ ನಕಲಿ ಮಾಡಿದ ಭೂಪನ ಮೇಲೆ ಬಿತ್ತು ಕೇಸ್!
ಬೀದರ್ , ಬುಧವಾರ, 16 ಜನವರಿ 2019 (16:12 IST)
ನಕಲಿ ‌ಸಹಿ ಮಾಡಿದ ಅಧಿಕಾರಿ ವಿರುದ್ಧ ಜಿಲ್ಲಾಧಿಕಾರಿ ಎಫ್ ಐ ಆರ್ ದಾಖಲು ಮಾಡಿರುವ ಘಟನೆ ನಡೆದಿದೆ.
ಬೀದರ್ ಜಿಲ್ಲಾಧಿಕಾರಿ ಡಾ. ಎಚ್. ಆರ್. ‌ಮಾಹದೇವ ಅವರಿಂದ ದೂರು ದಾಖಲು ಮಾಡಲಾಗಿದೆ.

ನಕಲಿ ಸಹಿ ಮತ್ತು ಖೊಟ್ಟಿ ದಾಖಲೆ ಸೃಷ್ಠಿಸಿ ಹೋಟೆಲ್ ಬಾರ್‌ ಗೆ ಅನುಮತಿ ನೀಡಲಾಗಿತ್ತು. ಹಾಲಿ ಬೆಂಗಳೂರು ಸಹಕಾರ ಸಂಘಗಳ(ವಲಯ-೨) ಉಪನಿಬಂಧಕರ ವಿರುದ್ಧ 420 ಕೇಸ್ ದಾಖಲಾಗಿದೆ.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದ ಕಿಶೋರ್ ಜೋಶಿ, ಬೀದರ್ ನಗರದ ನಾವದಗೇರಿ 55 ಹಾಗೂ 59 ಸರ್ವೇ ನಂ.ನಲ್ಲಿ ಶೆಫರ್ಡ್ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ಸಿಎಲ್ 7 ನಡೆಸಲು ಜಿಲ್ಲಾಧಿಕಾರಿಯ ನಕಲಿ ‌ಸಹಿ ಮಾಡಿದ ಆರೋಪವಿರುವ ಪ್ರಕರಣ ಇದಾಗಿದೆ. ಜಿಲ್ಲಾಧಿಕಾರಿ ನಕಲಿ ಸಹಿ ಮಾಡಿ ಪರವಾನಿಗೆ ನೀಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.Share this Story:

Follow Webdunia kannada

ಮುಂದಿನ ಸುದ್ದಿ

ಪ್ರಸಾದಕ್ಕಾಗಿ ಬಂದ ಭಕ್ತರ ಮೇಲೆ ದೌರ್ಜನ್ಯ: ಆರೋಪ