ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ; ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಪೇಜಾವರಶ್ರೀಗಳು

ಶುಕ್ರವಾರ, 11 ಜನವರಿ 2019 (14:22 IST)
ಉಡುಪಿ : ಮಲ್ಪೆ ಮೀನೂಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಉಡುಪಿಯ ಪೇಜಾವರಶ್ರೀಗಳು  ಪತ್ರವೊಂದನ್ನು  ಬರೆದಿದ್ದಾರೆ.


ಮೀನುಗಾರರು ನಾಪತ್ತೆಯಾಗಿ ತಿಂಗಳು ಹತ್ತಿರವಾಗುತ್ತಿದೆ. ಶೀಘ್ರ ಪತ್ತೆಯಾಗುವಂತೆ ಕ್ರಮ ಕೈಗೊಳ್ಳಿ. ಉನ್ನತ ಮಟ್ಟದ ಎಲ್ಲಾ ತಂತ್ರಜ್ಞಾನ, ಸಾಮಥ್ರ್ಯ ಬಳಸಿ ಅರಬ್ಬೀ ಸಮುದ್ರದಲ್ಲಿ ಕಾಣೆಯಾದ ಮೀನುಗಾರರ ಶೀಘ್ರ ಪತ್ತೆಗೆ ತಾವು ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಶ್ರೀಗಳು ಪ್ರಧಾನಿ ಮೋದಿಯವರಲ್ಲಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.


ಸ್ವಾಮೀಜಿ ಪತ್ರ ಬರೆದು ಅದನ್ನು ಈಮೇಲ್ ಮೂಲಕ ರವಾನೆ ಮಾಡಿದ್ದಾರೆ. ಹಾಗೇ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರದ ಪ್ರತಿಯನ್ನು ರವಾನೆ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕುಖ್ಯಾತ ಮನೆಗಳ್ಳರ ಬಂಧನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ