ಮೀನುಗಾರರ ಪತ್ತೆಗೆ ಆಗ್ರಹಿಸಿ ಹೆಚ್ಚಿದ ಒತ್ತಡ

ಶುಕ್ರವಾರ, 11 ಜನವರಿ 2019 (13:40 IST)
ನಾಪತ್ತೆಯಾಗಿರುವ ಮೀನುಗಾರರನ್ನು ಹುಡುಕುವಂತೆ ಹಾಗೂ ಪತ್ತೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆಗಳು ಮುಂದುವರಿದಿವೆ.
ಮಲ್ಪೆಯಲ್ಲಿ ನಾಪತ್ತೆಯಾಗಿರುವ ಏಳು ಜನ ಮೀನುಗಾರರನ್ನು ಪತ್ತೆ ಮಾಡಿಕೊಡುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಗಂಗಾ ಮತಸ್ಥರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸತೀಶ್, ಹರೀಶ್, ರಮೇಶ್, ಸಾಮೋದರ್, ಚಂದ್ರಶೇಖರ್, ರವಿ, ಲಕ್ಷ್ಮಣ್ ಎಂಬವರು ನೋಂದಣಿ ಸಂಖ್ಯೆ IND-KA-02MM4632 ಸಂಖ್ಯೆಯ ಸುವರ್ಣ ತ್ರಿಭುಜ ಎಂಬ ಹೆಸರಿನ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಇಂದಿಗೆ ಅವರು ನಾಪತ್ತೆಯಾಗಿ 26ದಿನಗಳಾದರೂ ಯಾವುದೇ ಸುಳಿವಿಲ್ಲ.

ಇದು ಕರ್ನಾಟಕ ರಾಜ್ಯಾದ್ಯಂತ ಇರುವ ಎಲ್ಲ ಮೀನುಗಾರಿಕೆ ಮಾಡುವವರಿಗೆ ಚಿಂತೆ ಗೀಡುಮಾಡಿದೆ. ಅವರನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ನೀಡುತ್ತಿದ್ದೇವೆ ಎಂದರು.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಡುರಸ್ತೆಯಲ್ಲೇ ವ್ಯಾಪಾರಿ ಮೇಲೆ ಹಲ್ಲೆ