ನಡುರಸ್ತೆಯಲ್ಲೇ ವ್ಯಾಪಾರಿ ಮೇಲೆ ಹಲ್ಲೆ

ಶುಕ್ರವಾರ, 11 ಜನವರಿ 2019 (12:43 IST)
ನಡುರಸ್ತೆಯಲ್ಲಿ ಅದೂ ಹಾಡುಹಗಲಲ್ಲಿಯೇ ವ್ಯಾಪಾರಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಹುಬ್ಬಳ್ಳಿ ನಗರದ ಹಳೇ ಹುಬ್ಬಳ್ಳಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.  ಹಳೇ ಹುಬ್ಬಳ್ಳಿಯ ಗುಡ್ಯಾಳ ರಸ್ತೆಯಲ್ಲಿರುವ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಅಂಗಡಿ ವಿಷಯಕ್ಕೆ ಸಂಬಂಧಿಸಿದಂತೆ ವ್ಯಾಪಾರಿ ಈರಣ್ಣ ಪವಾರ್ ಎಂಬಾತನನ್ನು ನಾಲ್ಕೈದು ಜನ ದುಷ್ಕರ್ಮಿಗಳು ಥಳಿಸಿದ್ದಾರೆ.

ಆನಂದ ನಗರ ನಿವಾಸಿಯಾಗಿರುವ ಈರಣ್ಣ ಪವಾರ್ ಮೇಲೆ ದುಷ್ಕರ್ಮಿಗಳು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ಚಿತ್ರಣ ಸಿಸಿಟಿವಿಯಲ್ಲಿ ದಾಖಲಾಗಿದೆ. ಗಾಯಗೊಂಡ ಈರಣ್ಣನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜೆಡಿಎಸ್ ನ ಪರಿಷತ್ ನಾಮನಿರ್ದೇಶನಕ್ಕೆ ಹೆಸರು ಫೈನಲ್ ಮಾಡಿರುವ ರಾಜ್ಯ ಸರ್ಕಾರ