Publish Date: Sat, 12 Jan 2019 (12:02 IST)
Updated Date: Sat, 12 Jan 2019 (12:12 IST)
ಬೆಂಗಳೂರು : ನೂತನ ಮರಳು ನೀತಿಯನ್ನು ಒಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಪರಮೇಶ್ವರ್, ‘ಲೋಕೋಪಯೋಗಿ ಇಲಾಖೆಯ ಮೂಲಕ ಮರಳು ಬ್ಲಾಕ್ ಗಳನ್ನು ಹಂಚಿಕೆ ಮಾಡುವಲ್ಲಿ ಹಲವಾರು ಅಡೆತಡೆಗಳು ಉಂಟಾಗಿದ್ದವು. ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಪರಿಗಣಿಸಿ ಟೆಂಡರ್ ನೀಡಿದ ಹಲವಾರು ದೂರುಗಳು ಬಂದಿದ್ದವು’ ಎಂದು ಹೇಳಿದ್ದಾರೆ.
ಹಾಗಾಗಿ ‘ಇ ಟೆಂಡರ್ ಮೂಲಕವೇ ಮರಳುಗಾರಿಕೆ ಟೆಂಡರ್ ನೀಡುವುದನ್ನು ಮತ್ತಷ್ಟು ಬಿಗಿಗೊಳಿಸಿ ಹೊಸ ಮರಳು ನೀತಿ ರೂಪಿಸಲು ಹಲವಾರು ಸಲಹೆಗಳು ಕೇಳಿಬಂದಿವೆ. ಒಂದು ವಾರದಲ್ಲಿ ಹೊಸ ನೀತಿ ಪ್ರಕಟಗೊಳ್ಳಲಿದೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.