Publish Date: Sun, 19 Aug 2018 (18:59 IST)
Updated Date: Sun, 19 Aug 2018 (19:09 IST)
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಭಂಟ ಹಾಗೂ ಆತನ ಹಣಕಾಸು ವ್ಯವಸ್ಥಾಪಕ ಜಬ್ಬೀರ್ ಮೋತಿ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಭೂಗತ ಪಾತಕಿ ಹಾಗೂ ಮುಂಬೈ ಸರಣಿ ಸ್ಪೋಟದ ಆರೋಪಿ ದಾವೂದ್ ಇಬ್ರಾಹಿಂನೆಲ್ಲ ರಹಸ್ಯಗಳನ್ನು ಬಲ್ಲಿದವನಾಗಿರುವ ಆತನ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದ ಜಬ್ಬೀರ್ ಮೋತಿ ಎಂಬಾತನನ್ನು ಲಂಡನ್ನಿನ ಹಿಲ್ಟನ್ ಹೋಟೆಲ್ ನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆ ಮೂಲಕ ದಾವೂದ್ ಗೆ ಕಾನೂನು ಕುಣಿಕೆ ಬಿಗಿಯಾದಂತೆ ಆಗುತ್ತಿದೆ.
ಕರಾಚಿ ಮತ್ತು ದುಬೈನಲ್ಲಿರುವ ದಾವೂದ್ ಪತ್ನಿ ಹಾಗೂ ಇತರ ಹತ್ತಿರದ ಸಂಬಂಧಿಕರ ಹಣಕಾಸು ವ್ಯವಹಾರಗಳನ್ನು ಈ ಬಂಧಿತ ಮೋತಿ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಲಂಡನ್ ಪೊಲೀಸರು ಹಿಲ್ಟನ್ ಹೊಟೇಲಿನಲ್ಲಿ ಬಂಧಿಸಿದ್ದಾರೆ .