Publish Date: Tue, 16 Jan 2018 (07:49 IST)
Updated Date: Tue, 16 Jan 2018 (07:53 IST)
ಬೆಂಗಳೂರು : ತುಮಕೂರು ಜಿಲ್ಲೇ ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆಯ ಕರೆ ಬಂದಿರುವುದಾಗಿ ತಿಳಿದುಬಂದಿದೆ.
ಶಾಸಕ ಸುರೇಶ್ ಬಾಬು ಅವರು ಬೆಂಗಳೂರಿನ ಬಸವೇಶ್ವರ ನಗರದ ನಿವಾಸದಲ್ಲಿದ್ದಾಗ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆಯ ಕೆರೆ ಮಾಡಿ ‘ಕೂಡಲೇ 10 ಕೋಟಿ ರೂ. ಕೊಡಬೇಕು ಇಲ್ಲದಿದ್ದರೆ ನಿನ್ನ ಪ್ರಾಣಕ್ಕೆ ಅಪಾಯ. ದೂರು ನೀಡಿದ್ದರೆ ಕುಟುಂಬಕ್ಕೆ ಅಪಾಯ ಮಾಡುತ್ತೇನೆ’ ಎಂದು ಹಿಂದಿಯಲ್ಲಿ ಮಾತನಾಡಿ ಬೆದರಿಕೆಹಾಕಿದ್ದಾನೆ. ಆಮೇಲೆ ಮೆಸೇಜ್ ಮಾಡಿ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿದುಬಂದಿದೆ. ಶಾಸಕ ಸುರೇಶ್ ಬಾಬು ಅವರು ಈ ಬಗ್ಗೆ ಬಸವೇಶ್ವರ ನಗರದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ