Select Your Language

Notifications

webdunia
webdunia
webdunia
webdunia

ಧರ್ಮಸ್ಥಳ ಮಂಜುನಾಥನ ಮುಂದೆ ಪ್ರಮಾಣ ಮಾಡಲಿ: ಇಂದ್ರಜಿತ್ ಲಂಕೇಶ್ ಪ್ರತಿಸವಾಲು

bangalore
bangalore , ಶನಿವಾರ, 17 ಜುಲೈ 2021 (20:04 IST)
ನಟ ದರ್ಶನ್ ವಿಚಲಿತರಾಗಿದ್ದಾರೆ. ಹಾಗಾಗಿ ಗಂಡಸ್ತನದ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ತಪ್ಪು ಮಾಡಿಲ್ಲ ಅನ್ನುವುದಾದರೆ ಧರ್ಮಸ್ಥಳ ಮಂಜುನಾಥನ ಮುಂದೆ ತಪ್ಪು ಮಾಡಿಲ್ಲ ಅಂತ ಪ್ರಮಾಣ ಮಾಡಲಿ ಎಂದು ನಿರ್ದೇಶಕ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಪ್ರತಿಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಶನ್ ಹೇಳಿದಂತೆ ನಾನು ಗಾಂಡೂಗಿರಿ ಎಂಬ ಶಬ್ಧ ಬಳಸಿಲ್ಲ. ಗೂಂಡಾಗಿರಿ ಎಂದು ಹೇಳಿದ್ದೇನೆ. ಲಾಯರ್ ನನ್ನ ಪಕ್ಕದಲ್ಲಿ ಕೂರಿಸಿಕೊಂಡಿದ್ದು ಗಂಡಸ್ತನ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅವರು ಬಳಸಿರುವ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.
ನಾನು ಅವರಿಗೆ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರ ಕೊಡಲಿ. ಅಷ್ಟೇ. ನನ್ನ ಬಳಿ ಇರುವ ಆಡಿಯೋ, ವೀಡಿಯೋ ಮುಂತಾದ ದಾಖಲೆಗಳನ್ನು ತನಿಖಾಧಿಕಾರಿಗಳ ಮುಂದೆ ಕೊಡುತ್ತೆನೆಯೇ ಹೊರತು ಬಹಿರಂಗಪಡಿಸಲ್ಲ. ಅವರ ಯಾವ ಮಾತಿನಿಂದಲೂ ನಾನು ವಿಚಲಿತ ಆಗಲ್ಲ ಎಂದು ಇಂದ್ರಜೀತ್ ಹೇಳಿದರು.
ಇದು ಗಂಡಸ್ತನದ ಪ್ರಶ್ನೆಯಲ್ಲ. ಬಡವನ ಪರ ಧ್ವನಿ. ಸಪ್ಲಯರ್ ಗೆ ಹೊಡೆದಿದ್ದೀರೋ ಇಲ್ಲವೋ? ಅರುಣಾಕುಮಾರಿಯನ್ನು ತೋಟಕ್ಕೆ ಕರೆಸಿಕೊಂಡಿದ್ದೀರೊ ಇಲ್ಲವೋ? ಮುಂತಾಗಿ ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಿ. ಇಲ್ಲವೇ ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಮಾಡಲಿ ಎಂದು ಸವಾಲು ಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವೇಶ ಪತ್ರ ಪಡೆದು ಪರೀಕ್ಷೆಯತ್ತ ಮುಖ ಮಾಡಿದ ಮಕ್ಕಳು: ಸುರೇಶ್ ಕುಮಾರ್