Publish Date: Fri, 06 Sep 2019 (15:41 IST)
Updated Date: Fri, 06 Sep 2019 (15:44 IST)
ಆ ಮನೆಯ ಮಗನ ಹುಟ್ಟುಹಬ್ಬವಿತ್ತು. ಎಲ್ಲರೂ ಸಂಭ್ರಮದಲ್ಲಿದ್ದರು. ಆದರೆ ಕೇಕ್ ರೂಪದಲ್ಲಿ ಬಂದ ಜವರಾಯ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಮಗನನ್ನು ಜತೆಗೆ ಅವರ ಅಪ್ಪನನ್ನು ಬಲಿ ಪಡೆದುಕೊಂಡಿದೆ.
ತೆಲಂಗಾಣದ ಸಿದ್ದಿಪೇಟದಲ್ಲಿ ಘಟನೆ ನಡೆದಿದ್ದು, ಅಪ್ಪ ಮಗನನ್ನು ಕೇಕ್ ಬಲಿ ಪಡೆದುಕೊಂಡಿದೆ.
ಮಗನ ಬರ್ತಡೇ ಕೇಕ್ ತಿಂದಿರೋ ಅಪ್ಪ, ಮಗ ಸಾವನ್ನಪ್ಪಿದ್ದರೆ, ತಾಯಿ, ಮಗಳು ಗಂಭೀರವಾಗಿರುವ ಸ್ಥಿತಿಯಲ್ಲಿದ್ದು ಚಿಕಿತ್ಸೆ ಮುಂದುವರಿದಿದೆ.
ಜಮೀನು ವಿವಾದವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಜಮೀನು ವಿವಾದ ಹೊಂದಿದ್ದ ಸಂಬಂಧಿಯು ಕೇಕ್ ನಲ್ಲಿ ವಿಷ ಬೆರೆಸಿರಬಹುದು ಅಂತ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.