Select Your Language

Notifications

webdunia
webdunia
webdunia
webdunia

ನೆರೆ ಪರಿಹಾರ ಚೆಕ್ ಪಡೆಯಲು ಲಂಚ ಕೊಡಬೇಕಾ?

ನೆರೆ ಪರಿಹಾರ ಚೆಕ್ ಪಡೆಯಲು ಲಂಚ ಕೊಡಬೇಕಾ?
ಬೆಳಗಾವಿ , ಶುಕ್ರವಾರ, 6 ಸೆಪ್ಟಂಬರ್ 2019 (15:16 IST)
ರಾಜ್ಯದಲ್ಲಿ ನೆರೆ ಪರಿಸ್ಥಿತಿಯಿಂದ ಸಹಸ್ರಾರು ಜನರ ಬದುಕು ಬೀದಿಗೆ ಬಿದ್ದಿದೆ. ಈ ನಡುವೆ ಸರಕಾರ ಪರಿಹಾರ ಚೆಕ್ ವಿತರಣೆ ಮಾಡುತ್ತಿದ್ದರೂ ಅದರಲ್ಲಿಯೂ ಭ್ರಷ್ಟಾಚಾರ ನುಸುಳುತ್ತಿದೆ ಎಂದು ಜನರು ದೂರಿದ್ದಾರೆ.

ಕುಂದಾನಗರಿ ಖ್ಯಾತಿಯ ಬೆಳಗಾವಿ ಜಿಲ್ಲೆಯ ಜನರು ಪ್ರವಾಹದಿಂದಾಗಿ ಹಾನಿ ಅನುಭವಿಸಿದ್ದಾರೆ. ಈ ನಡುವೆ, ಕೆಲವು ಪುಡಾರಿಗಳು, ಅಧಿಕಾರಿಗಳು ಲಂಚ ಪಡೆದು ನೆರೆ ಪೀಡಿತರಿಗೆ ಪರಿಹಾರ ಚೆಕ್ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಧಿಕಾರಿಗಳು ಹಾಗೂ ದಲ್ಲಾಳಿಗಳು ಸಂತ್ರಸ್ಥರಿಂದ ಹಣ ಲಪಟಾಯಿಸುತ್ತಿದ್ದಾರೆ. ಅಸಲಿಗೆ ನಿರಾಶ್ರಿತರಿಗೆ ಮುಟ್ಟಬೇಕಾದ ಚೆಕ್ ಗಳು ಲಂಚ ನೀಡಿದವರಿಗೆ ಹಾಗೂ ಸಂತ್ರಸ್ಥರಲ್ಲದವರಿಗೂ ದೊರಕುತ್ತಿವೆ ಅಂತ ಜನರು ಆರೋಪ ಮಾಡಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಮೋಟಾರ್ ವಾಹನ ನಿಯಮ ಜಾರಿಗೆ ತರಲು ಕಾರಣ ತಿಳಿಸಿದ ಸಚಿವ ನಿತಿನ್ ಗಡ್ಕರಿ