Publish Date: Wed, 19 Jul 2023 (14:16 IST)
Updated Date: Wed, 19 Jul 2023 (16:34 IST)
ಬಿಎಸ್ ವೈ ಕಾಲಿಗೆ ಬಿದ್ದು ಸಿಟಿ ರವಿ ಆಶೀರ್ವಾದ ಪಡೆದಿದ್ದಾರೆ.ಸಿಟಿ ರವಿ ಬಿ ಎಸ್ ವೈ ಭೇಟಿ ಮಾಡಿದ್ದು ಬಾರೀ ಕುತೂಹಲ ಮೂಡಿಸಿದೆ.ರಾಜ್ಯಾಧ್ಯಕ್ಷರ ಸ್ಥಾನ ರೇಸ್ ಸಿಟಿ ರವಿ ಇದ್ದು,ಬಿ ಎಸ್ ವೈ ಮೂಲಕ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಸಿಟಿ ರವಿ ಲಾಭಿ ನಡೆಸಿದ್ರಾ?ಅನ್ನುವ ಪ್ರಶ್ನೆ ಕಾಡತೊಡಗಿದೆ.ಬಿಎಸ್ ವೈ ವಿರುದ್ಧ ಒಂದು ಕಾಲದಲ್ಲಿ ಸಿ ಟಿ ರವಿ ಆಕ್ರೋಶ ಹೊರಹಾಕ್ತಿದ್ದರು.ಕುಟುಂಬ ರಾಜಕಾರಣದ ಬಗ್ಗೆ ಪದೇ ಪದೇ ಧ್ವನಿ ಎತ್ತುತ್ತಿದ್ರು.ಆದರೆ ಇದೀಗ ಬಿಎಸ್ ವೈ ಭೇಟಿ ಮಾಡಿದಾರೆ.ರಾಜ್ಯ ಬಿಜೆಪಿಯಲ್ಲಿ ಬಿಎಸ್ ವೈ ಶಕ್ತಿ ಈಗ ಗೊತ್ತಾಯ್ತೇ?ಬಿಎಸ್ ವೈ ಬಿಟ್ಟು ರಾಜಕಾರಣ ಇಲ್ಲ ಅನ್ನೋದು ಮನದಟ್ಟಾಯ್ತೇ?ಹಾಗಾಗಿಯೇ ಇವತ್ತು ಭೇಟಿ ಮಾಡಿ ಕಾಲಿಗೆ ಬಿದ್ರಾ?ಬಿ.ಎಲ್.ಸಂತೋಷ್ ಪರವಾಗಿದ್ದ ಬಿಜೆಪಿ ನಾಯಕ ,ಸಂತೋಷ್ ಪರವಾಗಿಯೇ ರವಿ ಬ್ಯಾಟಿಂಗ್ ಮಾಡ್ತಿದ್ರು.ಇದೀಗ ಬಿಎಸ್ ವೈ ಶಕ್ತಿಯ ದರ್ಶನವಾಯ್ತೇ? ಅನ್ನುವ ಪ್ರಶ್ನೆ ವ್ಯಕ್ತವಾಗಿದೆ.