Publish Date: Wed, 19 Jul 2023 (13:06 IST)
Updated Date: Wed, 19 Jul 2023 (12:52 IST)
ದೆಹಲಿ : ಟೊಮೆಟೊ ಎಲ್ಲ ಕಡೆ ಟೊಮೆಟೊ ಬೆಲೆ ಏರಿಕೆಯ ಮಾತು, ಟೊಮೆಟೊಗೆ ಚಿನ್ನ ಬೆಲೆ ಆಗಿದೆ ಎಂದು ಎಲ್ಲರೂ ಚಿಂತೆ ಪಡುತ್ತಿದ್ದಾರೆ.
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಟೊಮೆಟೊದ್ದೇ ಟ್ರೆಂಡಿಂಗ್, ಯಾವಾಗ ಈ ಟೊಮೆಟೊ ಬೆಲೆ ಕಡಿಮೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿರುವ ಗ್ರಾಹಕರೇ ಇಲ್ಲೊಮ್ಮೆ ನೋಡಿ, ಟೊಮೆಟೊವನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲು ಸರ್ಕಾರ ಮುಂದಾಗಿದೆ.
ಇನ್ನೂ ರಿಯಾಯಿತಿ ಬೆಲೆಯಲ್ಲಿ ಟೊಮೆಟೊ ಎಲ್ಲೆಲ್ಲಿ ಸಿಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇಂದಿನಿಂದ ದೆಹಲಿ, ಗುರುಗ್ರಾಮ್ ಮತ್ತು ಫರಿದಾಬಾದ್ನ ವಿವಿಧ ಸ್ಥಳಗಳಲ್ಲಿ ಟೊಮೆಟೊಗಳನ್ನು ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.