Select Your Language

Notifications

webdunia
webdunia
webdunia
webdunia

ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಟೊಮೆಟೊ ಮಾರಾಟ

ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಟೊಮೆಟೊ ಮಾರಾಟ
ಹಾವೇರಿ , ಬುಧವಾರ, 5 ಜುಲೈ 2023 (11:32 IST)
ಹಾವೇರಿ : ರಾಜ್ಯದಲ್ಲಿ ಈಗ ತರಕಾರಿ ಬೆಲೆ ಗಗನಕ್ಕೆ ಏರಿದೆ. ಅದರಲ್ಲೂ ಟೊಮೆಟೊ ಬೆಲೆ ಕೆಜಿಗೆ 150 ರೂ. ನಿಂದ 200 ರೂ. ಸನಿಹಕ್ಕೆ ಹೋಗಿದೆ. ಹಾವೇರಿ ಜಿಲ್ಲೆಯಲ್ಲಿ ಟೊಮೆಟೊ ಬೆಲೆ ದುಬಾರಿಯಾದ ಹಿನ್ನೆಲೆ ಕಳ್ಳತನವಾಗದಂತೆ ವ್ಯಾಪಾರಿಯೊಬ್ಬರು ಸಿಸಿಟಿವಿ ಕಣ್ಗಾವಲಿನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.
 

ಹಾನಗಲ್ ತಾಲೂಕಿನ ಅಕ್ಕಿಆಲೂರಿನಲ್ಲಿ ನಡೆದ ಸಂತೆಯಲ್ಲಿ, ಕೃಷ್ಣಪ್ಪ ಎಂಬವರು ಟೊಮೆಟೊ ಕಳ್ಳತನ ಆಗದಂತೆ ಎಚ್ಚರಿಕೆ ವಹಿಸಿ ಸಿಸಿಟಿವಿ ಕಾವಲಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ 1 ಕೆಜಿ ಟೊಮೆಟೊ ಬೆಲೆ 150 ರೂ. ಆಗಿದೆ. ಖರೀದಿ ಮಾಡುವ ನೆಪದಲ್ಲಿ ಜನ ಟೊಮೆಟೊ ಕದಿಯಬಾರದು ಎಂಬ ಕಾರಣಕ್ಕೆ ಸಿಸಿ ಕ್ಯಾಮೆರಾ ಹಾಕಿ ವ್ಯಾಪಾರ ನಡೆಸುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅನ್ನಭಾಗ್ಯದ ಹಣಭಾಗ್ಯಕ್ಕೆ ಮುಹೂರ್ತ : ಜುಲೈ 10 ರೊಳಗೆ ಅಕೌಂಟ್ಗೆ ಹಣ?