Select Your Language

Notifications

webdunia
webdunia
webdunia
webdunia

ಗಗನಕ್ಕೇರಿದ ತರಕಾರಿಗಳ ಬೆಲೆ! ಟೊಮೆಟೊ ಬೆಲೆ ಕೇಳುದ್ರೆ ಶಾಕ್ ಆಗ್ತೀರಾ?

ಗಗನಕ್ಕೇರಿದ ತರಕಾರಿಗಳ ಬೆಲೆ! ಟೊಮೆಟೊ ಬೆಲೆ ಕೇಳುದ್ರೆ ಶಾಕ್ ಆಗ್ತೀರಾ?
ನವದೆಹಲಿ , ಮಂಗಳವಾರ, 30 ಆಗಸ್ಟ್ 2022 (08:18 IST)
ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದಾಗಿ ತರಕಾರಿ ಬೆಲೆಗಳು ಗಗನಕ್ಕೆರಿದ್ದು, ಟೊಮೆಟೊ 1 ಕೆ.ಜಿಗೆ 500ರೂ. ಆಗಿದೆ.

ಪಾಕಿಸ್ತಾನದಲ್ಲಿ ರಾಷ್ಟ್ರವ್ಯಾಪಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆಗಳಿಗೂ ಹಾನಿಯಾಗಿ ತರಕಾರಿ ಬೆಲೆಗಳೆಲ್ಲವೂ ಗಗನಕ್ಕೆರಿವೆ. ಟೊಮೆಟೊ ಬೆಲೆ 1 ಕೆಜಿಗೆ 500 ರೂ. ಆಗಿದ್ದರೆ, ಈರುಳ್ಳಿ ಕೆಜಿಗೆ 300 ರೂ., ನಿಂಬೆಹಣ್ಣು ಕೆ.ಜಿಗೆ 400 ರೂ.ಗೆ ಮಾರಾಟವಾಗುತ್ತಿದೆ.

ಟೊಮೆಟೊ ಬೆಲೆಯು ಪ್ರತಿ ಕೆಜಿಗೆ 80 ರೂ. ಇತ್ತು. ಇದೀಗ ಆ ಬೆಲೆಗಿಂತ ಕನಿಷ್ಠ 6 ಪಟ್ಟು ಏರಿಕೆಯಾಗಿದೆ. ಆದರೆ ಈರುಳ್ಳಿ ಕೆ.ಜಿಗೆ ಅಧಿಕೃತ ದರ 61 ರೂ. ಇತ್ತು. ಅದಕ್ಕಿಂತ 5 ಪಟ್ಟು ಅಧಿಕವಾಗಿ ಮಾರಾಟವಾಗುತ್ತಿದೆ.

ಈ ಮೂರು ತರಕಾರಿಗಳ ಜೊತೆಗೆ ಶುಂಠಿ, ಬೆಳ್ಳುಳ್ಳಿ ಬೆಲೆಯೂ ಏರಿಕೆಯಾಗಿದೆ. ಈ ಬಗ್ಗೆ ಖರೀದಾರರೊಬ್ಬರು ಮಾತನಾಡಿದ್ದು, ಈಗ ಬಡವರು ಟೊಮೆಟೊವನ್ನು ನೋಡಬಹುದು, ಆದರೆ ಖರೀದಿಸಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ